ಮೂಡುಬಿದರೆ: ರಾಣಿಯರ್ ಸಮಾಜ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಕೊಡಂಗಲ್ಲು ಶ್ರೀಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ಶಿಲನ್ಯಾಸ ನೆರವೇರಿಸಲಾಯಿತು.
ಯುವಜನಸೇವೆ ಮತ್ತು ಮೀನುಗಾರಿಕ ಸಚಿವ ಕೆ. ಅಭಯಚಂದ್ರ ಜೈನ್ ಶಿಲಾನ್ಯಾಸ ನೆರವೇರಿಸಿ, ಪುರಸಭೆಯ ಎಸ್ಎಫ್ಸಿ ನಿಯಡಿ 2014-15ರಲ್ಲಿ 5ಲಕ್ಷ ಹಾಗೂ ಪುರಸಭಾ ನಿಧಿಯಿಂದ 2ಲಕ್ಷ ಹಾಗೂ 2016-17ರ ಎಸ್ಎಫ್ಸಿ ನಿಧಿಯಿಂದ 5ಲಕ್ಷ ಒದಗಿಸಿದ್ದು ಸರ್ಕಾರದಿಂದ 10ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.
ಪುರಸಭಾ ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸ್ಥಾಯಿ ಸಂಸ್ಥೆ ಅಧ್ಯಕ್ಷ ಕೊರಗಪ್ಪ, ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಶೇಖರ, ಪುರಸಭೆಯ ಮಾಜಿ ಅಧ್ಯಕ್ಷ ಪ್ರೇಮಾನಂದ ಪ್ರಭು, ಮಹಮ್ಮಾಯಿ ದೇವಸ್ಥಾನದ ಆಡಳಿತ ಸಂಸ್ಥೆಯ ಅಧ್ಯಕ್ಷ ಸೋಮೇಶ ಉಪಸ್ಥಿತರಿದ್ದರು. ಪುರಸಭಾ ನಾಮನಿರ್ದೇಶಿತ ಸದಸ್ಯ ಶೇಖರ ಸ್ವಾಗತಿಸಿದರು. ಸುರೇಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ವಂದಿಸಿದರು.
