ಮೂಡುಬಿದರೆ: ಶಂಸುಲ್ ಉಲಮಾ ಇಸ್ಲಾಮಿಕ್ ಕಾಲೇಜಿನ 6ನೇ ವಾರ್ಷಿಕೋತ್ಸವ, ಮಾ.26 ಹಾಗೂ 27ರಂದು ತೋಡಾರಿನಲ್ಲಿರುವ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಲಿದೆ.
ವಾರ್ಷಿಕೋತ್ಸವ ಸಮಾರಂಭದ ಜೊತೆಗೆ ಮತ ಪ್ರಭಾಷಣ, ದ್ಸಿಕ್ ಮಜ್ಲಿಸ್, ಶಂಸುಲ್ ಉಲಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ಜರಗಲಿದೆ ಎಂದು ತೋಡಾರಿನ ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ(ಎಸ್ಯುಎಸಿ) ಸಂಚಾಲಕ ಸಲೀಂ ಹಂಡೇಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

IMG_9122
ಮಾ.26ರಂದು ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯೊಂದಿಗೆ ಮಗ್ರಿಬ್ ನಮಾಜಿನ ನಂತರ ದ್ಸಿಕ್ ಮಜ್ಲಿಸ್ ಮತ್ತಿ ಅದ್ಯಾತ್ಮಿಕ ಸಂಗಮ ನಡೆಯಲಿದೆ. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕೋಶಾಧಿಕಾರಿ ಸಯ್ಯದ್ ಮಹಮ್ಮದ್ ಮುತ್ತುಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಗಮದ ನೇತೃತ್ವವನ್ನು ಶೈಖುನಾ ಮಾಹಿನ್ ಉಸ್ತಾದ್ ವಹಿಸಲಿದ್ದು, ಅಬ್ದುಲ್ ಹಮೀದ್ ಫೈಝಿ ಅಂಬಲಕಡವು ಮುಖ್ಯ ಪ್ರಭಾಷಣಕಾರಾಗಿ ಭಾಗವಹಿಸಲಿದ್ದಾರೆ. ಸಯ್ಯದ್ ಅಹ್ಮದ್ ಪೂಕೋಯ ತಂಙಳ್, ಸಯ್ಯದ್ ಶರ್ಪ್ದ್ದೀನ್ ತಂಙಳ್, ಸಯ್ಯದ್ ಕರಾವಳಿ ತಂಙಳ್, ಮೂಡುಬಿದರೆ ವಲಯದ ಮಸೀದಿಗಳ ಖತೀಬರು, ಫೈಝೀಸ್ ಅಸೋಸಿಯೇಶನ್, ದಾರಿಮಿ ಅಸೋಸಿಯೇಶನ್. ಮೂಡುಬಿದರೆ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮಿನ್, ದ.ಕ ಜಿಲ್ಲಾ ಎಸ್ಕೆಎಸ್ಎಸ್ಎಫ್ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಬಹು.ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣ:
ಮಾ.27ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಅಧ್ಯಕ್ಷ, ಮೂಡುಗೆರೆಯ ಖಾಝಿ ಸಯ್ಯದ್ ಎನ್ಪಿಎಂ ಝೈನುಲ್ ಅಬಿದೀನ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಪ್ರಭಾಷಣಗಾರ ಬಹು.ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕೆ.ಎಂ ಉಸ್ಮಾನುಲ್ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕಾರ್ಯದಶರ್ಿ, ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಪ್ರಧಾನ ಕಾರ್ಯದಶರ್ಿ ಶೈಖುನಾ ಶೈಖುಲ್ ಜಾಮಿಅಃಕೆ ಆಲಿಕುಟ್ಟಿ ಮುಸ್ಲಿಯಾರ್ ಪ್ರಭಾಷಣ ಮಾಡಲಿದ್ದಾರೆ ಎಂದರು.
ಪ್ರಶಸ್ತಿ ಪ್ರದಾನ:
ವಾಷರ್ಿಕೋತ್ಸವದ ಸಮಾರೋಪ ಸಮಾರಂಭ, 2016ನೇ ಸಾಲಿನ ಶಂಸುಲ್ ಉಲಮಾ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಕಳ ಶಬ್ಬೀರಿಯಾ ಅರೇಬಿಕ್ ಕಾಲೇಜಿನ ಅಧ್ಯಕ್ಷ ಶಬೀರ್ ಹಾಜಿ, ಬೆಂಗಳೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ ಖಾದರ್, ಶಾಸಕ ಬಿ.ಎ ಮೊದಿನ್ ಭಾವ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಶಾಸ್ತವು ಶ್ರೀಭೂತನಾಥೇಶ್ವರದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಇಬ್ರಾಹಿಂ ಕೋಡಿಜಾಲ್, ಎಂ.ಎಸ್ ಅಬೂಬಕ್ಕರ್, ಝಕ್ಕರಿಯಾ ಜೋಕಟ್ಟೆ ಸಹಿತ ಗಣ್ಯರು ಭಾಗವಹಿಸಲಿರುವರು ಎಂದು ಸಲೀಂ ಅವರು ಮಾಹಿತಿ ನೀಡಿದ್ದಾರೆ.
ಸ್ವಾಗತ ಸಮಿತಿಯ ಪ್ರಮುಖರಾದ ಎಂ.ಎಚ್ ಮೊದಿನ್ ಹಾಜಿ ಅಡ್ಡೂರು, ಎಸ್ಯುಎಸಿ ಕಾಯರ್ಾಧ್ಯಕ್ಷ ಉಸ್ಮಾನುಲ್ ಫೈಝಿ, ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *