ವಿಟ್ಲ: ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲೆಯಲ್ಲಿ ಆಲ್ ಕಾರ್ಗೊರ್  ಲೋಜಿಸ್ಟಿಕ್ಸ್ ಲಿಮಿಟೆಡ್ ಮುಂಬೈ ಇದರ ಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ| ಶಶಿಕಿರಣ್ ಶೆಟ್ಟಿ `ಕಂಪ್ಯೂಟರ್ ಸಾಕ್ಷರತಾ ಯೋಜನೆ’ ಅನ್ವಯ ಉದಾರವಾಗಿ ಒದಗಿಸಿದ 15 ಕಂಪ್ಯೂಟರ್ಗಳನ್ನು ಅಳವಡಿಸಿ ನವೀಕರಿಸಿದ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನೆಯನ್ನು ಮಂಗಳೂರು ಆಲ್ ಕಾರ್ಗೊರ್  ಲೋಜಿಸ್ಟಿಕ್ ಕಂಪನಿಯ ಮೇನೇಜರ್ ನೆಕ್ರೆ ಸುರೇಂದ್ರ ಶೆಟ್ಟಿ ಮಾಡಿದರು. ಅಧ್ಯಕ್ಷತೆ ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ವಹಿಸಿದ್ದರು.cmp (4)

cmp (7)

cmp (8)

ಪುತ್ತೂರು ಫಿಲೋಮಿನಾ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಎಂ ರಾವ್ ಅತಿಥಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಮತ್ತು ವಿಟ್ಲ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ ಭಾಗವಹಿಸಿದ್ದರು. ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ ಶಿ ವಿಶ್ವನಾಥ ಮತ್ತು ವಿಠಲ ಸುಪ್ರಜಿತ್ ಐಟಿಐ ಪ್ರಾಂಶುಪಾಲ ರಘುರಾಮ ಶಾಸ್ತ್ರಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ಪ್ರಸ್ತಾವಿಸಿದರು. ಶಿಕ್ಷಕ ಎಂ ಕೆ ಶಂಕರನಾರಾಯಣ ಪ್ರಸಾದ್ ವಂದಿಸಿದರು. ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ  ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೀಣಾದೇವಿ ಸಹಕರಿಸಿದರು. ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯ ಕೋಡಿಜಾಲು ಗೋವಿಂದ ಭಟ್, ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ವಿಟ್ಲ ಯುವಕ ಮಂಡಲದ ಗೌರವಾಧ್ಯಕ್ಷ ಸುದರ್ಶನ ಪಡಿಯಾರ್ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *