ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಪಂಡ್ಇಂಟರ್ ನ್ಯಾಷನಲ್ಯು.ಎಸ್. ಎ. ಮತ್ತು ಮಂಗಳ ಜ್ಯೋತಿ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿನಡೆಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆಯಾದ ಪ್ರತಿಭಾ ಕುಳಾಯಿಯವರು ಹೆಣ್ಣಿನಚಿತ್ರಕ್ಕೆ ಬಣ್ಣಕೊಟ್ಟು ಮತ್ತು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಹೆಣ್ಣಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಅವಳ ಆತ್ಮ ವಿಶ್ವಾಸವನ್ನುಇಮ್ಮಡಿಗೊಳಿಸಬಹುದು. ಶಿಕ್ಷಣದ ಮೂಲಕ ಮಹಿಳೆ ಯಾರದೂ ಅವಲಂಬನೆ ಇಲ್ಲದೆ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಾನಮಾನವನ್ನು ಪಡೆದು ಕೊಳ್ಳಬಹುದು.ಇಂದಿಗೂಸಮಾಜದಲ್ಲಿ ಲಿಂಗ ತಾರತಮ್ಯದ ಪಿಡುಗುಇದೆ.ಇದಕ್ಕೆ ಮುಕ್ತಿಯನ್ನುಕೊಡಬೇಕು.ಗಂಡು ಹೆಣ್ಣುಎನ್ನುವುದನ್ನು ಬಿಟ್ಟು ಮೊದಲು ಮಾನವರಾಗಬೇಕು.ಭಾರತದಲ್ಲಿ ಮಹಿಳೆಯರು ಯಾವ ಸಂಸ್ಕೃತಿಯಲ್ಲಿ ಇರಬೇಕೆಂದು ಸಮಾಜ ತಿಳಿಸುತ್ತದೆಯೋ ಅದೇ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಯಪಡಿಸಬೇಕು. ಹೆಣ್ಣುಯಾವಾಗಲೂ ಕರುಣಾಮಯಿ ಈ ಕರುಣಾಮಯಿಯಾದ ಹೆಣ್ಣು ಇನ್ನೊಂದು ಹೆಣ್ಣಿನ ಜೊತೆ ದ್ವೇಷವನ್ನು ಹೊಂದದೆ ಪ್ರೀತಿಯಿಂದ ಬದುಕಬೇಕು ಮತ್ತು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಎಸ್. ಡಿ. ಎಂ.ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್.ಮಾತನಾಡುತ್ತಾ ಮಹಿಳ ಸಬಲೀಕರಣ ಮತ್ತುಸ್ವ್ವಾವಲಂಬನೆ ವಿಚಾರದಲ್ಲಿ ಸ್ವಸಹಾಯ ಸಂಘಗಳು ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆತಮಗೆಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಪಡೆಯಲು ಮತ್ತು ಸಮಾಜದ ಪ್ರಗತಿ ಹೊಂದಲು ಸಾಧ್ಯವಾಗುತ್ತದೆಎಂದರು.
ಕಾರ್ಯಕ್ರಮದಲ್ಲಿಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಮಾರ್ಗಟ್ಮಸ್ಕರೇನಸ್, ಚೈಲ್ಡ್ ಪಂ ಡ್ಇಂಟರ್ ನ್ಯಾಷನಲ್ ಮಂಗಳ ಜ್ಯೋತಿ ಸಮಗ್ರ ಶಾಲೆಯಕಾರ್ಯಕ್ರಮ ಸಂಯೋಜಕಿಯಾದ ಕುಸುಮ, ಮಂಗಳ ಜ್ಯೋತಿಒಕ್ಕೂಟದ ಕಾರ್ಯದರ್ಶಿ ಅಕ್ಷತಾ, ಪ್ರೌಢಶಾಲಾ ಮುಖ್ಯೋಪಾಧ್ಯರಾದ ಆಶೋಕ್ ಕುಮಾರ್ ಶೆಟ್ಟಿ, ಐ. ಟಿ. ಐ. ಪ್ರಾಂಶುಪಾಲರಾದ ನರೇಂದ್ರ ಉಪಸ್ಥಿತರಿದ್ದರು
ಚೈಲ್ಡ್ ಪಂಡ್ಇಂಡಿಯಾ ಮಂಗಳ ಜ್ಯೋತಿಯ ವ್ಯವಸ್ಥಾಪಕರಾದ ಪುನೀತ್ ಡಿ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿ, ಮಂಗಳ ಜ್ಯೋತಿಒಕ್ಕೂಟದಅಧ್ಯಕ್ಷರು ಅಸ್ಮತ್ ವರದಿ ವಾಚಿಸಿ, ಹರೀಶ್ ಕುಲಶೇಖರ ವಂದಿಸಿ, ರಮ್ಯ ಹರೀಶ್ ಕಾರ್ಯಕ್ರಮವನ್ನು ನಿರೂಪಿದರು.
ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಸ್ಫರ್ಧೆಗಳು ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
