ಅವರ್ ಲೇಡಿ ಆಫ್ ಪೊಂಪೆ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಡಾ. ಬಿ. ಆರ್. ಅಂಬೇಡ್ಕರ್ರವರ 125 ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೆ.ಬಿ. ಸಿಕ್ವೇರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಂಬೇಡ್ಕರ್ರವರ ಶಿಸ್ತುಬದ್ಧ ಜೀವನನಮಗೆಲ್ಲ ಮಾದರಿ ಎಂದು ಹೇಳಿದರು. ಪ್ರಾಂಶುಪಾಲ ಮಹೇಶ್ ಶೆಟ್ಟಿ , ಮುಖ್ಯ ಶಿಕ್ಷಕಿಯಾದ ಸ್ವರ್ಣಲತಾ, ಐರಿನ್ ಸಾಂತುಮಯೂರ್ ಮತ್ತು ಎಲ್ಲ ಶಿಕ್ಷಕ ಶಿಕ್ಷಕೇತರರು ಹಾಜರಿದ್ದರು. ಶಿಕ್ಷಕ ವರ್ನನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

