ಬಂಟ್ವಾಳ; ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪುರಸಭಾ ಆಡಳಿತ ಎಚ್ಚೆತ್ತುಕೊಂಡಿದ್ದು, ಬಿ.ಸಿ.ರೋಡಿನ ಫೈಓವರ್ ಬಳಿಯ ರಸ್ತೆಗಳ ಚರಂಡಿಗಳ ಹೂಳೆತ್ತುವ ಕಾರ್ಯ ನಡೆಸಿದೆ. ಕಳೆದ ಹಲವು ವರ್ಷಗಳಿಂದ ಸರ್ವೇಸ್ ರಸ್ತೆ ಹಾಗೂ ಬಿ.ಸಿ.ರೋಡಿನ ಚರಂಡಿ ಅವ್ಯವಸ್ಥೆ ಜನತೆಯನ್ನು ಕಾಡುತ್ತಿದ್ದು, ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ಪುರಸಭಾ ಆಡಳಿತ ಮಳೆಗಾಲ ಆರಂಭವಾದ ಬಳಿಕವಷ್ಟೇ ಚರಂಡಿ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.
1 (2)

3 (1)

4 (1)
ಕಳೆದ ಕೆಲ ದಿನಗಳ ಹಿಂದೆ ಸುರಿದಿದ್ದ ಮಳೆಗೆ ರಸ್ತೆಯಲ್ಲೇ ನೀರು ನಿಂತು ನೀರು ಅಂಗಡಿಯೊಳಗೆ ನುಗ್ಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಮತ್ತು ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಚಿತ್ರ;ಕಿಶೋರ್ ಪೆರಾಜೆ

By suddi9

Leave a Reply

Your email address will not be published. Required fields are marked *