ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಮಂಗಳೂರು ಇದರ ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘ(ರಿ)ದ ಶ್ರೀ ದೇವಿ ಪುರುಷರ ಸಂಘ ಇದರ ಸಹಯೋಗದೊಂದಿಗೆ ನಾಯಕತ್ವ ಹಾಗೂ ಮಾನವ ಹಕ್ಕುಗಳ ಕುರಿತು ಮಾಹಿತಿ ಕಾರ್ಯಕ್ರಮವು ಈಶ್ವರಕಟ್ಟೆ ಕೈಕಂಬದಲ್ಲಿ ಜರುಗಿತು. ಕಾರ್ಯಕ್ರಮವನ್ನು ಶ್ರೀದೇವಿ ಸ್ವ ಸಹಾಯ ಸಂಘದ ಅಧ್ಯಕ್ಷರಾದ ರಾಜೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಮಾಲಿಂಗ ನಾಯಕ್ರವರು ಆಗಮಿಸಿ ನಾಯಕತ್ವ ಹಾಗೂ ಮಾನವ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ವಲಯ ಸಂಯೋಜಕರಾದ ಈಶ್ವರ ನಾಯ್ಕ ಹಾಗೂ ಕಾರ್ಯಕರ್ತೆಯರಾದ ಪಾಲಾಕ್ಷಿ ಹಾಗೂ ಸೀತಾಲಕ್ಷ್ಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

