ಬಂಟ್ವಾಳ:  ಕೇಂದ್ರದಲ್ಲಿ ಎನ್ಡಿಎ ಸರ್ಕಾರವು ಆರೋಗ್ಯ ರಕ್ಷಣೆ ನೆಪದಲ್ಲಿ ಲಕ್ಷಾಂತರ ಮಂದಿ ಅನಕ್ಷರಸ್ಥ ಬಡ ಕಾರ್ಮಿಕರಿಗೆ ಬದುಕು ನೀಡಿದ್ದ ಬೀಡಿ ಕೈಗಾರಿಕೆ ಮುಚ್ಚಲು ‘ಕೋಟ್ಪಾ’ ಕಾಯ್ದೆ ಜಾರಿಗೊಳಿಸುವ ಮೂಲಕ ಪರೋಕ್ಷವಾಗಿ ಬೀಡಿ ಕೈಗಾರಿಕೆ ಮುಚ್ಚುವಂತೆ ಪ್ರೇರೇಪಿಸುತ್ತಿದೆ. ಇದೇ ಬೀಡಿ ಕಾರ್ಮಿಕರು ದುಡಿದು ಪಾವತಿಸಿದ್ದ ಕೋಟ್ಯಾಂತರ ಮೊತ್ತದ ಆದಾಯವನ್ನು ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ತುಂಬಿದ ಬೀಡಿ ಕಾರ್ಮಿಕರನ್ನು ಬೀದಿ ಪಾಲು ಮಾಡದಂತೆ ತಡೆಯಲು ಸಂಘಟಿತ ಹೋರಾಟ ಅಗತ್ಯ ಎಂದು ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಅಧ್ಯಕ್ಷ ಪಿ.ಸಂಜೀವ ಹೇಳಿದ್ದಾರೆ.
ತಾಲ್ಲೂಕಿನ ಪಾಣೆಮಂಗಳೂರು ಫಿರ್ಕಾ  ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ವತಿಯಿಂದ ಮಂಗಳವಾರ ಪಾಣೆಮಂಗಳೂರಿನಲ್ಲಿ ಏರ್ಪಡಿಸಿದ್ದ 39 ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

21btl-Cpi

21btl-Beedi
ಬೀಡಿ ಕಾರ್ಮಿಕರು ಬದುಕು ಮುನ್ನಡೆಸಲು ಪರ್ಯಾಯ ಉದ್ಯೋಗ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಶಾಶ್ವತ ಪರಿಹಾರ ನೀಡಿ ಕಾರ್ಮಿಕರನ್ನು ಸಂರಕ್ಷಿಸಲಿ ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲಾ ಭಾಗ್ಯಗಳನ್ನು ರಾಜ್ಯದ ಜನತೆಗೆ ಕರುಣಿಸಿದ್ದರೂ ಬೀಡಿ ಕಾರ್ಮಿಕರಿಗೆ ಮಾತ್ರ ರೂ.12.75 ತುಟ್ಟಿಭತ್ತೆ ನೀಡದೆ ಮಾಲೀಕರಿಗೆ ರಿಯಾಯಿತಿ ನೀಡಿ, ಬೀಡಿ ಕಾರ್ಮಿಕರನ್ನು ಕಡೆಗಣಿಸಿದೆ ಎಂದರು.
ಹಿರಿಯ ಕಾರ್ಮಿಕ ಮುಖಂಡ ಬಿ.ಕೆ.ಕೃಷ್ಣಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ  ವಿ.ಕುಕ್ಯಾನ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಕಾರ್ಯದಶರ್ಶಿ ವಿ.ಎಸ್.ಬೇರಿಂಜ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಮತ್ತಿತರರು ಮಾತನಾಡಿದರು.
ಬೀಡಿ ಎಂಡ್ ಟೋಬೆಕ್ಕೋ ಲೇಬರ್ ಯೂನಿಯನ್(ಎಐಟಿಯುಸಿ) ಕೋಶಾಧಿಕಾರಿ ಎಂ.ಕರುಣಾಕರ್, ಉಪಾಧ್ಯಕ್ಷ ಎಂ.ಶಿವಪ್ಪ ಕೋಟ್ಯಾನ್, ಯುವ ಮುಖಂಡ ತಾರನಾಥ ಕೆ., ಸುಧಾಕರ್ ಕಲ್ಲೂರು, ನರಿಕೊಂಬು ಗ್ರಾಮ ಪಂಚಾಯಿತಿ ಸದಸ್ಯೆ ಬೇಬಿ ಪಿ.ಸಂಜೀವ, ಪಾಣೆಮಂಗಳೂರು ಫಿಕರ್ಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಉಪಾಧ್ಯಕ್ಷರಾದ ಕೆ.ಈಶ್ವರ್ ಮತ್ತು ಸುನೀತಾ ಗೋಪಾಲ ಇದ್ದರು.
ಇದೇ ವೇಳೆ ಸಂಘದ ಸಹಕಾರ್ಯದರ್ಶಿ  ಶಮಿತಾ ಮತ್ತು ಶುಭಾಶಿನಿ ಪ್ರಮುಖ ನಿರ್ಣಯ ಮಂಡಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಪ್ರಧಾನ ಕಾರ್ಯದರ್ಶಿ  ಸುರೇಶ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಕಾರ್ಯದರ್ಶಿ  ಶಮಿತಾ ವಂದಿಸಿದರು.

By suddi9

Leave a Reply

Your email address will not be published. Required fields are marked *