ಸುದ್ದಿಮನೆ ಕಟೀಲು ಅಮ್ಮುಂಜೆ ಮೊಹನ್ ಕುಮಾರ್ ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಯಕ್ಷ ಆರಾಧಕರು, ಕಟೀಲು ಮೇಳದಲ್ಲಿ ನಿರಂತರ 25 ವರ್ಷ ಸೇವೆ ಸಲ್ಲಿಸುತಿರುದು ಶ್ಲಾಘನೀಯ, ಇವರ ಬದುಕು ಬಂಗಾರವಾಗಲಿ ಎಂದು ಕಟೀಲು ದೇವಳದ ಅನುವಂಶೀಯ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದರು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ನಡೆದ ಕಟೀಲು ಮೇಳದ ಕಲಾವಿದ ಬಿ.ಮೋಹನ್ ಕುಮಾರ್ ಅಮ್ಮುಂಜೆ ಯವರ ಯಕ್ಷ ಕಲಾಯಾನದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಅಮುಂಜೆ ರಜತ ಪರ್ವ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಬಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಶ್ಯಾಮಲ ಗಣಪತಿ ಶಾಸ್ತ್ರಿ ದಂಪತಿಗಳು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಟೀಲು ದೇವಳ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ವಹಿಸಿದ್ದರು.

ಈ ಸಂದರ್ಭ ಅಮ್ಮುಂಜೆ ಕಲಾಯಾನದ ರೂವಾರಿಗಳಾದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗಳನ್ನು ಸನ್ಮಾನಿಸಲಾಯಿತು, ಸೇರಾಜೆ ಸೀತಾರಾಮ ಭಟ್ ಅಭಿನಂದನಾ ಬಾಷಣಗೈದರು, ಅಮ್ಮುಂಜೆ ಸಾಕ್ಷಚಿತ್ರದ ಸಿ.ಡಿ ಮೋಹನಾಂತರಂಗವನ್ನು ಬಿಡುಗಡೆಗೊಳಿಸಲಾಯಿತು, ಯಕ್ಷಕವಿ ಗಣೇಶ್ ಕೊಲಕಾಡಿ, ಅಮಿತ್ ಕುಮಾರ್ ಬಜ್ಪೆ, ಸರಸ್ವತಿ ಎರ್ಮಾಳ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಖ್ಯಾತ ಬಾಗವತ ಪಟ್ಲ ಸತೀಶ್ ಶೆಟ್ಟಿ, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಕ್ಕಾರು, ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ, ಮಂಗಳೂರು ಯಕ್ಷದ್ರುವ ಪಟ್ಲ ಪೌಂಡೇಶನ್ ಉಪಾಧ್ಯಕ್ಷ ಸುಧೀಂದ್ರ ರಾವ್ ಎಕ್ಕಾರು, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ಕುಮಾರ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ದೊಡ್ಡಯ್ಯ ಮೂಲ್ಯ, ಚಂದ್ರಶೇಖರ ಬೆಲ್ಚಡ, ಶ್ರೀನಿವಾಸ ರಾವ್ ಮೈಸೂರು, ಎಂ.ಎಲ್ ಭಟ್ ಸಾಗರ, ಸತೀಶ್ ಭಟ್ ಬೆಂಗಳೂರು, ರಜತ ಪರ್ವ ಸಮಿತಿ ಅಧ್ಯಕ್ಷ ರಾಜೀವ ಕೈಕಂಬ, ಕಲಾವಿದರಾದ ಮೋಹನ್ ಕುಮಾರ್ ಅಮ್ಮುಂಜೆ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಶ್ರೀಮತಿ ಮಂಜುಳ ಶೆಟ್ಟಿ, ಪ್ರಧಾನ ಸಂಚಾಲಕ ಬಿ. ಜನಾರ್ದನ ಅಮ್ಮುಂಜೆ, ರವಿ ಅಲೆವೂರಾಯ, ಮತ್ತಿತರರು ಇದ್ದರು.
ಮಧ್ಯಾಹ್ನ ಕಟೀಲು ದೇವಳದಲ್ಲಿ ಪ್ರಾರ್ಥನೆ, ಗೆಜ್ಜೆ ಸೇವೆ. ಮಧ್ಯಾಹ್ನ 2 ರಿಂದ 4 ರತನಕ ಹಳೆಬೇರು ಹೊಸ ಚಿಗುರು ಶೀರ್ಷಿಕೆಯಡಿ ತೆಂಕು ಬಡಗು ತಿಟ್ಟಿನ ಪ್ರಸಿದ್ಧ 6 ಭಾಗವತರಿಂದ ಯಕ್ಷಗಾನಾಮೃತ, ಬಳಿಕ ಸಂಜೆ 4 ರಿಂದ 6.30 ರವರೆಗೆ ಶ್ರೀ ಕೃಷ್ಣ ಜನ್ಯ ಕಾಳಿಂಗ ಮರ್ಧನ ಶ್ರೀ ಕೃಷ್ಣ ಲೀಲೆ ಯಕ್ಷಗಾನ ಬಯಲಾಟ ನಡೆಯಿತು.