ಬಂಟ್ವಾಳ: ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನ ಎದುರಿನಲ್ಲಿದ್ದ ಮರವೊಂದು ಬುಡ ಸಮೇತ ಧರೆಶಾಯಿಯಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪರಿಣಾಮ ಈ ಸ್ಥಳದಲ್ಲಿದ್ದ ನಿಲ್ಲಿಸಲಾಗಿದ್ದ ಟೆಂಪೊ ಹಾಗೂ ಟವೇರಾ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಈ ವಾಹನದಲ್ಲಿ ಮತ್ತು ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ವಾಹನಗಳು ಹಾನಿಗೊಂಡಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಮರವನ್ನು ಆ ಬಳಿಕ ತೆರವುಗೊಳಿಸಲಾಗಿದೆ.
KAR_8732

By suddi9

Leave a Reply

Your email address will not be published. Required fields are marked *