ಬಂಟ್ವಾಳ:ಯಕ್ಷಗಾನ ಪ್ರದರ್ಶನದಲ್ಲಿ ವಿನೂತನ ಪ್ರಯೋಗಕ್ಕೆ ಸಿದ್ಧ ಪಡಿಸಿರುವ ಯಕ್ಷ-ಹಾಸ್ಯ ವೈಭವ ನೂತನ ತಂಡದ ಉದ್ಘಾಟನಾ ಕಾರ್ಯಕ್ರಮ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಿ ಮಂದಿರದಲ್ಲಿ ಜು.1 ರಂದು ಜರಗಿತು.
ಶ್ರೀ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರು ಉದ್ಘಾಟಿಸಿ ಶುಭ ಹಾರೈಸಿದರು.
0507pkt5
ತಂಡದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ ನವರಸ ಭರಿತ ಯಕ್ಷಗಾನದಲ್ಲಿ ಹಾಸ್ಯವೂ ಪ್ರಮುಖ ಸ್ಥಾನದಲ್ಲಿದೆ. ವಿಶ್ರಾಂತಿ ಇಲ್ಲದ ದುಡಿಮೆ ಮಾನವನಿಗೆ ವರವೂ ಹೌದು,ಶಾಪವೂ ಹೌದು. ವಿಶ್ರಾಂತಿಗಾಗಿ,ಮನ ಶಾಂತಿಗಾಗಿ ಹಪಹಪಿಸುವ ವ್ಯಕ್ತಿಗಳಿಗೆ ಹಾಸ್ಯವು ವರದಾನವೇ ಸರಿ ಎಂಬುದನ್ನು ಮನಗಂಡು ಯಕ್ಷಹಾಸ್ಯ ವೈಭವ ಎನ್ನುವ ಕಾರ್ಯಕ್ರಮದ ಮೂಲಕ ಯಕ್ಷಾಂಗನಕ್ಕೆ ಹೊಸ ಕೊಡುಗೆ ಎಂದು ಹೇಳಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಧನಂಜಯ ಶೆಟ್ಟಿ,ಪ್ರಮುಖರಾದ ಶಿವರಾಮ ಶೆಟ್ಟಿ ದೋಟ,ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು , ರಾಘವ ಗೇರುಕಟ್ಟೆ ನಾಳ ಉಪಸ್ಥಿತರಿದ್ದರು.ರಾಧಾಕೃಷ್ಣ ರೈ ಕೊಟ್ಟುಂಜ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *