ಬಜಪೆ:ದೊಡ್ಡಿಕಟ್ಟೆ ಶ್ರೀ ಸ್ವಯಂಭೂ ಉಮಾಮಹೇಶ್ವರ ದೇವಾಸ್ಥಾನದಲ್ಲಿ ದೇಗುಲ ಪಾಕಶಾಲೆ ಮತ್ತು ಸುತ್ತು ಪೌಳಿಗೆ ಶಿಲಾನ್ಯಾಸ ಸಮಾರಂಭ ನಂದಕುಮಾರ್ ಭಟ್ ಅವರ ದಾರ್ಮಿಕ ವಿದಿವಿಧಾನದೊಂದಿಗೆ ನಡೆಯಿತು.ಪುರಾತನ ಹಿನ್ನೆಲೆಯ ಪ್ರಸಿದ್ಧ ಶಿವದೇಗುಲ ಬಜಪೆ ಸಮೀಪದ ದೊಡ್ಡಿಕಟ್ಟ ಶ್ರೀ ಸ್ವಯಂಭೂ ಉಮಾಮಹೇಶ್ವರ ದೇವಳದ ನೂತನ ನೈವೇದ್ಯ ಪಾಕಶಾಲೆ ಹಾಗೂ ಸುತ್ತು ಪೌಳಿ ನಿರ್ಮಾಣದ ಸಲುವಾಗಿ ಶಿಲಾನ್ಯಾಸ ಕಾರ್ಯಕ್ರಮ ಜರಗಿತು. ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಎಲ್.ವಿ. ಅಮೀನ್ ಹಾಗೂ ಆರ್ಚಕ ವಿಶ್ವನಾಥ ಭಟ್ ಅವರ ಉಪಸ್ಥಿತಿಯಲ್ಲಿ ನಂದಕುಮಾರ್ ಭಟ್ ಅವರು ದಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಅತ್ಯಂತ ಕಾರಣಿಕದ ಕ್ಷೇತ್ರವಾಗಿರುವ ಶ್ರೀ ಸ್ವಯಂಭೂ ಉಮಾಮಹೇಶ್ವರ ಸನ್ನಿಯಲ್ಲಿ ಕಾಲ ಕಾಲಕ್ಕೆ ಸಾಮಾಜಿಕ, ದಾರ್ಮಿಕ, ಸಾಮೂಹಿಕ ಚಟುವಟಿಕೆಗಳನ್ನು ನಿರಂತರ ನಡೆಸಲಾಗುವುದು, ದಾನಿ ಲೋಕೇಶ್ ಆರ್ ಅಮೀನ್ ಕುಳಾಯಿ ಅವರ ಸಹಕಾರದೊಂದಿಗೆ ನೈವೇದ್ಯ ಪಾಕ ಶಾಲೆ ನಿರ್ಮಾಣಗೊಳ್ಳುತ್ತಿದ್ದು, ಇನ್ನೂ ಹಲವು ಕಾರ್ಯಗಳು ಕ್ಷೇತ್ರದಲ್ಲಿ ನಡೆಯಲಿದೆ, ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಲ್.ವಿ.ಅಮೀನ್ ತಿಳಿಸಿದರು. ಈ ಸಂದರ್ಭ ಬಜಪೆ ಶ್ರೀ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯ ಕಾರ್ಯದರ್ಶಿ ಶಿವರಾಮ ಪೂಜಾರಿ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು,
ಗೋಪಾಲ ಅಮೀನ್, ಸುಂದರ ಪೂಜಾರಿ, ಬಜಪೆ ಗ್ರಾ.ಪಂ. ಸದಸ್ಯ ಉದಯ ಕುಮಾರ್, ಬಜಪೆ ಕೋರ್ದಬ್ಬು ಸೇವಾ ಸಮಿತಿಯ ಅಧ್ಯಕ್ಷ ಶರತ್ ಸುವರ್ಣ, ಬಜಪೆ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಅಶೋಕ ಆಚಾರ್ಯ, ಧೀರಜ್, ಅರುಣ್ ಕುಮಾರ್, ದಿನ್ ರಾಜ್. ಜಿ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

