ಬಂಟ್ವಾಳ:ಭಂಡಾರಿಬೆಟ್ಟು ಕಲಾಯಿ ಎಂಬಲ್ಲಿ ಪ್ರಕಾಶ್ ಎಂಬವರಿಗೆ ಸೇರಿದ ಶ್ರೀಮಾತಾ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಸಹಿತ ಅಪಾರ ನಷ್ಟವಾಗಿತ್ತು. ಸುಟ್ಟುಹೋದ ಅಂಗಡಿಯ ಪುನರ್ ನಿರ್ಮಾಣ ಮಾಡಲು ಪಕ್ಷದ ಪ್ರಮುಖರಾದ ಉಳಿಪಾಡಿ ಗುತ್ತು ರಾಜೇಶ್ ನಾಯಕ್ ಸಹಕರಿಸಿದರು. ಅಂಗಡಿಯ ಪುನರ್ನಿರ್ಮಾಣದ ಉದ್ಘಾಟನೆಯನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಮತ್ತು ಪದ್ಮನಾಭ ಕೊಟ್ಟಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದಭಱದಲ್ಲಿ ಜಗದೀಶ್ ಕುಂದರ್, ಬಾಲಕೃಷ್ಣ ಕಲಾಯಿ, ವಿಶ್ವನಾಥ ಕಲಾಯಿ ಉಪಸ್ಥಿತರಿದ್ದರು.


