ಕೈಕಂಬ:ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಶನಿವಾರ ಪುಂಚಮೆಯಲ್ಲಿ ನೆರವೇರಿಸಲಿದ್ದಾರೆ.
ಸುಮಾರು ರೂ 18 ಕೋಟಿ 83 ಲಕ್ಷದ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ರಸ್ತೆ ಅಗಲೀಕರಣದೊಂದಿಗೆ ಅಭಿವೃದ್ಧಿಗೊಳಿಸುವ ಕಾಮಗಾರಿಯನ್ನು ಪೊಳಲಿ ಪಲ್ಘುಣಿ ಸೇತುವೆ ಬಳಿಯಿಂದ ಮೊಡಂಕಾಪು ರಸ್ತೆಯ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವರ ಪ್ರಕಟನೆ ತಿಳಿಸಿದೆ.