ಮೂಡುಬಿದಿರೆ: ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ ಮೂಡುಬಿದಿರೆ, ಗಾಣಿಗರ ಯುವ ಒಕ್ಕೂಟ, ಗಾಣಿಗರ ಮಹಿಳಾ ಒಕ್ಕೂಟದ ಜಂಟಿ ಆಶ್ರಯದಲ್ಲಿ, ಗುರಿಕಾರ ಸುಂದರ್ ಪುತ್ರನ್ ಅವರ ನಾರಂಪಾಡಿ ನಿವಾಸದಲ್ಲಿ `ಆಟಿಡ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮ ನಡೆಯಿತು. ಕೋಟೆಬಾಗಿಲು ಮಾಹಮ್ಮಾಯಿ ದೇವಸ್ಥಾನದ ಮೊಕ್ತೇಸರ ಸೇಸಪ್ಪ ಹೆಗ್ಡೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತೂರು- ದೈವರಾಧಕರ ಕೂಟದ ಸಹ ಸಂಚಾಲಕ ಅಜಿತ್ ಗೌಡ ಐವರ್ನಾಡು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ನಮ್ಮಲ್ಲಿರುವ ಆಚಾರ-ವಿಚಾರಗಳು ಮೂಢನಂಬಿಕೆಗಳಲ್ಲ.

ಅವು ಮೂಲ ನಂಬಿಕೆಗಳು. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯಿದೆ. ಅವುಗಳನ್ನು ನಮಗೆ ಅನುಕೂಲವಾಗುವ ರೀತಿಯಲ್ಲಿ ಬದಲಾಯಿಸುವುದಲ್ಲ. ಹಿರಿಯರು ನೀಡಿದ ಬದಲಾವಣೆಯ ವಿದಾನಗಳನ್ನು ಅನುಸರಿಸುವುದು ಒಳಿತು. ತುಳುವರು ನ್ಯಾಯ, ಸತ್ಯಕ್ಕಾಗಿ ಬದುಕುವವರು. ತುಳುನಾಡಿನ ಸಂಸ್ಕøತಿಯ ಕುರಿತು ಚಿಂತನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದರು. ಮೂಡುಬಿದಿರೆ ಪ್ರೆಸ್ಕ್ಲಬ್ ಕಾರ್ಯದರ್ಶಿ ಯಶೋಧರ ವಿ.ಬಂಗೇರ ಮುಖ್ಯ ಅತಿಥಿಯಾಗಿದ್ದರು. ಮೂಡುಬಿದಿರೆ ಗಾಣಿಗರ ಸಂಘದ ಗೌರವಾಧ್ಯಕ್ಷ ಪದ್ಮನಾಭ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಗುರಿಕಾರ ಸುಂದರ್ ಪುತ್ರನ್, ಸಂಘದ ಅಧ್ಯಕ್ಷ ಪ್ರತಾಪ್ ಬೆಟ್ಕೇರಿ, ಯುವ ಒಕ್ಕೂಟದ ಅಧ್ಯಕ್ಷ ರಂಜಿತ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗಂಧಿ ವೇದಿಕೆಯಲ್ಲಿದ್ದರು. ಜಗನ್ನಾಥ ಕಾರ್ಯಕ್ರಮ ನಿರೂಪಸಿದರು. ಸಂದ್ಯಾ ವಂದಿಸಿದರು. ತುಳುನಾಡಿನ ವಿಶೇಷತೆಯನ್ನು ಸಾರುವ 68 ವಿಧದ ಖಾದ್ಯಗಳ ಪ್ರದರ್ಶನವಿತ್ತು. ಖಾದ್ಯ ತಯಾರಿಸಿದ ಕುಟುಂಬಗಳನ್ನು ಪುರಸ್ಕರಿಸಲಾಯಿತು. ಗದ್ದೆಯಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಯಿತು.