ಕೈಕಂಬ:ಆಯುರ್‍ಸ್ಪರ್ಶ ಆಯುರ್‍ವೇದ ಆಸ್ಪತ್ರೆ ಗಂಜೀಮಠ ಮತ್ತು ಲಯನ್ಸ್ ಕ್ಲಬ್ ಕೈಕಂಬ ಇದರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರ ಆ.28ರಂದು ಗ್ರಾಂಡ್ ಗ್ಯಾಲಕ್ಸಿ ಹಾಲ್ ಕೈಕಂಬದಲ್ಲಿ ನಡೆಯಲಿದೆ. ಆರೋಗ್ಯ ತಪಸಣಾ ಶಿಬಿರವನ್ನು ಮಾನವ ಹಕ್ಕುಗಳ ರಕ್ಷಣೆ ಅಯೋಗದ ಅಧ್ಯಕ್ಷರಾದ ರವೀಂದ್ರನಾಥ್ ಶಾನುಬೋಗ್ ಉದ್ಘಾಟಿಸಲಿದ್ದಾರೆ, ಮಧುಮೇಹ ತಪಾಸಣೆ, ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನಗಳು ನಡೆಯಲಿದೆ. ಹಾಗೂ ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹದ ಬಗ್ಗೆ ಜನಜಾಗೃತಿ ಮೂಡಿಸಲು ಮಾಹಿತಿ ಕಾರ್ಯಗಾರವನ್ನು ಆgಯುರ್‍ಸ್ಪರ್ಶ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಶಿಬಿರದಲ್ಲಿ ಪಾಲ್ಗೊಳ್ಳಲು ಡಾ.ಸತೀಶ್ ಶಂಕರ ಬಿ.9482167168 ಅವರನ್ನು ಸಂಪರ್ಕಿಸಲು ಕೋರಲಾಗಿದೆ.

health-checkup-garg

By suddi9

Leave a Reply

Your email address will not be published. Required fields are marked *