ಅಗಸ್ಟ್ 25: ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಅ.25 ಗುರುವಾರದಂದು ತೆಂಕಬೆಳ್ಳೂರಿನ ಧನುಪೂಜೆಯ ನೀರಿನ ಟಾಂಕಿಯ ಬಳಿಯ “ಮಾಜಿ ಸೈನಿಕ ದಿ.ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸಂಜೆ 6ರಿಂದ ಧನುಪೂಜೆಯಿಂದ ಗರ್ಗಲ್‍ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಉದ್ಘಾಟನಾ ಸಭಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರು ಹಿ.ಪ್ರಾ.ಶಾಲೆ ತೆಂಕಬೆಳ್ಳೂರು ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ಗೌರವಾಧ್ಯಕ್ಷರು ಅನಂತರಾಮ ಹೇರಳ ವಹಿಸಿದ್ದು. ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಚಾಲಕರು ಕಾಂತಪ್ಪ ಶೆಟ್ಟಿ ಕೊಡ್ಮಾನ್ ಮಾಡಿದರು. ಮುಖ್ಯ ಅತಿಥಿಗಳಾಗಿ ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷರು ಜಯಂತಿ .ಎಸ್ ಬಟ್ಟಾಜೆ,ನಿವೃತ್ತ ಶಿಕ್ಷಕರು ಹಿ.ಪ್ರಾ. ಬಡಗಬೆಳ್ಳೂರು ಗಂಗಾಧರ ರೈ ಕಮ್ಮಾಜೆ, ಮಹಿಮಾ ಸಾಫ್ಟ್ ಡ್ರಿಂಕ್ಸ್ ಮಾಲಕರು ಕಮ್ಮಾಜೆ ರಿಚರ್ಡ್ ಜಾನ್ ಫೆರ್ನಾಂಡಿಸ್, ಬಡಗಬೆಳ್ಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೀಟಾ, ಅಮ್ಮುಂಜೆ ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಭಂಡಾರಿ, ಇಂಜಿನಿಯರ್ ರೊಬರ್ಟ್ ಡಿ’ಸೋಜಾ ಉಪಸ್ಥಿತರಿದ್ದರು.
ಆಟೋಟ ಸ್ಪರ್ಧೆಯಯಲ್ಲಿ ಕಬ್ಬಡಿ ಪ್ರಥಮ 5 ಸ್ಟಾರ್ ಅಡ್ಡೂರು, ಹಾಗೂ ದ್ವಿತೀಯ ತುಂಬೆ ತಂಡ ಮತ್ತು ಹಗ್ಗಜಾಗ್ಗಟದಲ್ಲಿ ಬ್ರಹ್ಮರಕೂಟ್ಲು ತಂಡ ಪ್ರಥಮ, ದ್ವೀತಿಯ ಫ್ರೆಂಡ್ಸ್ ಅಡ್ಡೂರು ತಂಡ ಜಯಗಳಿಸಿದೆ. ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರು,ಪ್ರಸಾದ್ ವುಡ್ ಇಂಡಸ್ಟ್ರೀಸ್ ಮಾಲಕರು ರೀತೇಶ್ ಬಾಳಿಗಾ, ಬಾಲಕೃಷ್ಣ ಉದ್ಯಮಿ ಪೊಳಲಿ, ಉಮೇಶ್ ಸಾಲ್ಯಾನ್ ಉದ್ಯಮಿ ಬೆಂಜನಪದವು ಇವರುಗಳು ಉಪಸ್ಥಿತರಿದ್ದರು. ಸಮರೋಪ ಸಮಾರಂಭ ಮುಗಿದ ನಂತರ ಸಂಜೆ 6ರಿಂದ ಧನುಪೂಜೆಯಿಂದ ಗರ್ಗಲ್‍ವರೆಗೆ ಶ್ರೀ ಕೃಷ್ಣ ದೇವರ ಭವ್ಯ ಶೋಭಯಾತ್ರೆ ನಡೆಯಿತು.


