ಕೈಕಂಬ:ಕಲಾಶ್ರೀ ಬಳಗ ಮತ್ತು ಕಲಾಶ್ರೀ ಮಹಿಳಾ ಬಳಗ ಇದರ 11ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಹಾಗೂ ಬಂಟ್ವಾಳ ತಾಲೂಕಿನ ಕರಿಯಂಗಳ ಕ್ಷೇತ್ರದ ತಾ.ಪಂ. ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದ.ಕ.ಜಿ.ಬಿಜೆಪಿ ಹಿ.ವ.ಮೋರ್ಚಾ ಪ್ರ.ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರಾ.ಸ್ವ. ಸೇ.ಸಂಘ ಸಂಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಉಧ್ಯಮಿ ರಾಜೇಶ್ ಹೆಗ್ಡೆ ಮಂಗಾಜೆ, ಗ್ರಾ.ಪಂ.ಸದಸ್ಯ ಸುರೇಶ್ ಮಣಿಕಂಠಪುರ, ಜನಾರ್ಧನ ಪುಂಚಮೆ,ಬಾಲಕೃಷ್ಣ ಮಾಸ್ಟರ್,ಕಲಾಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಹಾಗೂ ಗ್ರಾ.ಪಂ.ಸದಸ್ಯೆ ಶಕುಂತಳಾ ಸತೀಶ್ ಮೀಯಾಳ,ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ದೇವ್ದಾಸ್ ವಂದಿಸಿದರು.
