ಋಣ ಸಂದಾಯಕ್ಕಿರುವ ಏಕೈಕ ಮಾರ್ಗ ಸಮಾಜಸೇವೆ : ಅಭಯಚಂದ್ರ ಜೈನ್
ಮೂಡುಬಿದಿರೆ: ಸಮಾಜದ ಋಣ ಸಂದಾಯ ಮಾಡಲಿಕ್ಕಿರುವ ಏಕೈಕ ಅವಕಾಶವೇ ಸೇವೆ. ಅದನ್ನು ಉಪಕಾರವೆನ್ನದೇ ಕರ್ತವ್ಯವೆಂಬಂತೆ ನಡೆಸಿದಲ್ಲಿ ಸೇವೆಯಲ್ಲಿ ಸಾರ್ಥಕತೆ ದೊರಕುತ್ತದೆ. ಸಮಾಜಸೇವಾ ಮನೋಭಾವ ಜನರು ಮಾತ್ರವಲ್ಲದೇ ದೇವರು ಮೆಚ್ಚುವ ಕೆಲಸಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಶಿರ್ತಾಡಿಯ ಬ್ರಹ್ಮರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಸೌಹಾರ್ದ ಫ್ರೆಂಡ್ಸ್ ಕ್ಲಬ್ ಶಿರ್ತಾಡಿ ವತಿಯಿಂದ ಆಂಬುಲೆನ್ಸ್ ಸೇವೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಅಭಿವೃದ್ಧಿ ಕಾರ್ಯಗಳು ಒಂದೆಡೆ ನಡೆಯುತ್ತಿದ್ದಂತೆ, ಅದಕ್ಕಿಂತಲೂ ವೇಗವಾಗಿ ಸಮಾಜದಲ್ಲಿ ಬದಲಾವಣೆಗಾಗಿ ಸಂಘಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸರಕಾರಕ್ಕೆ ಸವಾಲಾಗಿರುವ ಕೆಲಸಗಳನ್ನು ಸಾಮಾಜಿಕ ಸಂಸ್ಥೆಗಳು ಬೆರಗುಗೊಳಿಸುವ ರೀತಿಯಲ್ಲಿ ನಡೆಸುತ್ತಿವೆ. ಇದೊಂದು ಧನಾತ್ಮಕ ಬೆಳವಣಿಗೆಯಾಗಿದೆ’ ಎಂದವರು ತಿಳಿಸಿದರು.

mbd_sep18_3
ಈ ಸಂದರ್ಭ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಎಂಟೆಕ್ ಸ್ನಾತಕೋತ್ತರ ಪದವಿಯನ್ನು ಬೆಳ್ಳಿ ಪದಕದೊಂದಿಗೆ ಉತ್ತೀರ್ಣರಾಗಿರುವ ಚಿಂತನ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಮರನಾಥ ಶೆಟ್ಟಿ ವಹಿಸಿ ಮಾತನಾಡಿ ಜನಸೇವೆಯ ಆದ್ಯತೆಯ ಕುರಿತು ಹೇಳಿದರು.
ಮೇಘನಾಥ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಪ್ರೇಮನಾಥ ಮಾರ್ಲ, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ ಹೆಗ್ಡೆ, ಕೃಷ್ಣರಾಜ ಭಟ್, ಶರತ್ ಡಿ. ಶೆಟ್ಟಿ, ಪ್ರಶಾಂತ್, ಪ್ರವೀಣ್ ಕುಮಾರ್, ಸತೀಶ್ ವಿ. ಶೆಟ್ಟಿ ಉಪಸ್ಥಿತರಿದ್ದರು.
ಡಾ.ಆಶಿರ್ವಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಜೈಸನ್ ಪಿರೇರಾ, ಯಶೋಧರಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ವಿ. ದೇವಾಡಿಗ ವಂದಿಸಿದರು.

By suddi9

Leave a Reply

Your email address will not be published. Required fields are marked *