ಮೂಡುಬಿದಿರೆ: ಶ್ರೀಸಿಂಚನ ಸೇವಾ ಟ್ರಸ್ಟ್ ಮೂಡುಬಿದಿರೆ ಇದರ ಆಶ್ರಯದಲ್ಲಿ `ಸ್ವ-ಸಹಾಯ ಸೃಷ್ಠಿ-ದೃಷ್ಠಿ’ ಸಂವಾದ ಕಾರ್ಯಕ್ರಮ ಸಮಾಜಮಂದಿರದಲ್ಲಿ ಭಾನುವಾರ ನಡೆಯಿತು.
ಮಾಜಿ ಸಚಿವ, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವಿಭಜಿತ ದ.ಕ ಜಿಲ್ಲೆಯ ಜನರಲ್ಲಿ ಆರ್ಥಿಕ ಬದ್ಧತೆಯನ್ನು ಮೂಡಿಸುವಲ್ಲಿ ಸಹಕಾರಿ ರಂಗದ ಪಾತ್ರ ಹಿರಿದು. ಪ್ರಾಮಾಣಿಕತೆಯೊಂದಿಗೆ ಆರ್ಥಿಕ ಸಹಾಯವನ್ನು ಜನಸಾಮಾನ್ಯ ಕೂಡ ಪಡೆಯಬಹುದೆಂಬ ವಿಶ್ವಾಸವನ್ನು ಇದು ಮೂಡಿಸಿದೆ. ಶ್ರೀ ಸಿಂಚನಾ ಸೇವಾ ಟ್ರಸ್ಟ್ ಜನಸಾಮಾನ್ಯರಿಗೆ ಆರ್ಥಿಕ ಬಲ ನೀಡುತ್ತಿರುವುದು ಮಾತ್ರವಲ್ಲ ಸಾಮಾಜಿಕ ಕಾಳಜಿಯಿಂದಲೂ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.

mbd_sep18_5
ಬಿ.ಸಿ ರೋಡ್‍ನ ಯಕ್ಷಲೋಕ ಲೈಫ್ ಸ್ಕಿಲ್ ತರಬೇತಿ ಕೇಂದ್ರದ ನಿರ್ದೇಶಕ ಎ. ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಉದ್ಯಮಿ ಕೆ.ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿದ್ದರು.
ಟ್ರಸ್ಟ್‍ನ ಅಧ್ಯಕ್ಷ ಮೋಹನ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಚಂದ್ರಹಾಸ ಪಾಟಕ್ ಸ್ವಾಗತಿಸಿದರು ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ.ಲಿ ಇದರ ನಿರ್ದೇಶಕ ಗೋಪಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮುದಾಕ್ಷ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಇಒ ಜಿನರಾಜ ಶೆಟ್ಟಿ ವಂದಿಸಿದರು.
ಕಾರ್ಯಕ್ರಮವನ್ನು ಮೂಡುಬಿದಿರೆಯ ಶ್ರೀಸಿಂಚನ ಸೌಹಾರ್ದ ಕ್ರೆಡಿಟ್ ಕೋ.ಲಿ ಪ್ರಾಯೋಜಿಸಿತು.

By suddi9

Leave a Reply

Your email address will not be published. Required fields are marked *