ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ನಿವಾಸಿ ಕಿರಣ್ ಅನಾ ರೋಗ್ಯದಿಂದ ಇದ್ದು ಅವರ ಚಿಕಿತ್ಸೆಗೆ ಕರಿಯಂಗಳ ವಲಯದ ಕಾಂಗ್ರೇಸ್ ಕಾರ್ಯಕರ್ತರು ಅವರ ಮನೆಗೆ ತೆರಳಿ ಆರ್ಥಿಕ ಸಹಾಯವನ್ನು ನೀಡಿದರು. ಕರಿಯಂಗಳ ವಲಯದ ಅಧ್ಯಕ್ಷ ಉಮೇಶ್ ಆಚಾರ್ಯ, ಉಧ್ಯಮಿಗಳಾದ ರಾಜೇಶ್ ಹೆಗ್ಡೆ, ಚಂದ್ರಹಾಶ ಪಲ್ಲಿಪಾಡಿ, ರಾಜೂ ಕೋಟ್ಯಾನ್, ಸೂರ್ಯಕಾಂತ್, ಚೇತನ್ ಮತ್ತಿತರರು ಇದ್ದರು.
