ಬಂಟ್ವಾಳ:ಹೆದ್ದಾರಿ ಅಧಿಕಾರಿಗಳ ಉದಾಸೀನತೆಯನ್ನು ರಾಜ್ಯದ ದೊರೆಯ ಗಮನಸೆಳೆಯುವ ನಿಟ್ಟಿನಲ್ಲಿ ಪುರಸಭೆಯ ಇಬ್ಬರು ಬಿಜೆಪಿ ಸದಸ್ಯರು ಮುಖ್ಯಮಂತ್ರಿಯವರ ಕಾರು ಬರುವ ಹಾದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ನಿಧ೯ರಿಸಿದ್ದಾರೆ‌.

4

1

2

3

ಬಂಟ್ವಾಳ-ವಿಲ್ಲಪುರಂ ರಸ್ತೆಯ ಬಿ.ಸಿ.ರೋಡಿನಿಂದ ಸುಮಾರು ಒಂದೂವರೆ ಕಿ.ಮಿ.ದೂರದಲ್ಲಿ ಅಲ್ಲಲ್ಲಿ ಹೊಂಡ ಬಿದ್ದು, ರಸ್ತೆ ತಗ್ಗಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಈಗಾಗಲೇ ಸಾಕಷ್ಟು ವಾಹನಗಳು ಅಪಘಾತಕ್ಕೂಳಗಾಗಿ ಸಾವು, ನೋವು ಉಂಟಾಗಿದೆ. ಈ ಬಗ್ಗೆ ಇಲಾಖೆಗೆ ಮನವಿಕೊಟ್ಟರೂ ಅಧಿಕಾರಿಗಳು ಉಢಾಫೆಯಿಂದ ಉತ್ತರಿಸುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳ ಕಾಯ೯ವೈಖರಿಯನ್ನು ಸಿಎಂ ಗಮನ ಸೆಳೆಯಲು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪುರಸಭಾ ಸದಸ್ಯ ದೇವದಾಸ ಶಟ್ಟಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *