ಅವರು ಇತೀಚಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಪ್ಪಿಸಲು ಹೆತ್ತವರು ಮಕ್ಕಳಿಗೆ ನೈತಿಕ ಮೌಲ್ಯವನ್ನು ಬೋದಿಸುತ್ತಾರೆ. ಅದು ಅವರ ಜೀವನಕ್ಕೆ ಪೂರಕವಾಗಿ ಇರುತ್ತದೆ. ಜೀವನದಲ್ಲಿ ನೈತಿಕತೆಯನ್ನು ಅಳವಡಿಸಿಕೊಂಡರೆ ಮುಂದೆ ನಮ್ಮ ಜೀವನವು ಒಳ್ಳಯ ರೀಯಲ್ಲಿ ರೂಪಿಸಬಹುದು. ಈಗಿಂದ ಈಗಾಲೇ ನೈತಿಕ ಮೌಲ್ಯವನ್ನು ಬೆಳೆಸಿಕೊಂಡು ಉತ್ತಮ ವಿದ್ಯಾರ್ಜನೆಯನಮ್ನು ಗಳಿಸಿಕೊಂಡು ನಡೆದರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಜ್ಪೆ ಚರ್ಚ್ನ ಧರ್ಮಗುರುಗಳಾದ ಲಿಯೋ ಲೋಬೋ ಶಿಬಿರದ ಸಂಯೋಜಕರಾದ ಜಾರ್ಜ್ ಜೀವನ್ ಸಿಕ್ವೇರ, ಪೇಜಾವರ ಧರ್ಮಪ್ರಾಂತ್ಯದ ಎಲ್ಲಾ ಧರ್ಮಗುರುಗಳು ಮತ್ತು ಸಿಸ್ಟರ್ಸ್ ಉಪಸ್ಥಿತರಿದ್ದರು.
3ದಿನದಗಳವರೆಗೆ ಶಿಬಿರ ನಡೆಯಲಿದೆ: ಅ.9ಅಧಿತ್ಯವಾರದಿಂದ ಅ.12 ಬುಧವಾರ ಸಂಜೆ 5ಗಂಟೆಗೆ ಸಮಾರೋಪನೆಗೊಳ್ಳಲಿದೆ. ಶಿಬಿರದಲ್ಲಿ ಪೆಜಾರ್ ಚರ್ಚ್, ಪೆರ್ಮುದೆ ಚರ್ಚ್,ಬಜಪೆ ಚರ್ಚ್, ಅದ್ಯಪಾಡಿ ಚರ್ಚ್ ,ಪೆರಾರ್ ಚರ್ಚ್, ಗುರುಪುರ ಕೈಕಂಬ ಚರ್ಚ್ನ 10ನೇ ಕ್ಲಾಸಿನ ವಿದ್ಯಾರ್ಥಿಗಳು ಭಾಗವಹಿಸಲಿರುವರು.
ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳು:ಸಾಂಸ್ಕ್ರತಿಕ ಕಾರ್ಯಕ್ರಮ, ಮೌಲ್ಯಮಾಪನ ಮತ್ತು ಪ್ರಾರ್ಥನೆ, ಸ್ವಚ್ಚತೆ, ಸಂಗೀತ ಕಾರ್ಯಕ್ರಮ, ಕ್ವೀಜ್, ಮಾಧ್ಯಮ,ಅಂತರ್ಜಾಲ, ಮಾದಕ ದ್ರವ್ಯ ಮತ್ತು ಅದರ ಪರಿಣಾಮ, ವ್ಯಕ್ತಿತ್ವ ವಿಕಸನ, ನಾಯಕತ್ವ, ಪಂಗಡದಲ್ಲಿ ಪಾತ್ರ, ಕ್ರೀಡೆ ಇದರ ಬಗ್ಗೆ ಸಂಪನ್ನೂಲ ವ್ಯಕ್ತಿಗಳು ಉಪದೇಶ ನೀಡಲಿದ್ದಾರೆ.

