ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಮಾತನಾಡಿ, ನನ್ನ ಬಾಲ್ಯ ಶಿಕ್ಷಣದಿಂದ ವಂಚಿತಾಗುವಂತಾಯಿತು. ಶಿಕ್ಷಣ ಸಿಗದವರು ಎಷ್ಟೆಲ್ಲ ಕಷ್ಟ ಅನುಭವಿಸುತ್ತಾರೆ ಎನ್ನುವುದನ್ನು ನಾನು ಬಲ್ಲೆ. ಕಿತ್ತಾಳೆ ಮಾರಿ ಶಾಲೆ ಅರಂಭಿಸಿದ್ದು, ಇಂದು ಅ ಶಾಲೆಯಲ್ಲಿ ಮೂನ್ನೂರಕ್ಕು ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಖುಷಿ ನೀಡಿದೆ ಎಂದರು. ಕಾಲೇಜಿನ ಎನ್ ಎಸ್ ಅಧಿಕಾರಿ ರೋಶನ್ ಶೆಟ್ಟಿ ಕಾರ್ಯಕ್ರಮದಲ್ಲಿದ್ದರು.
