ಮೂಡುಬಿದಿರೆ: ಪರ್ಯಾಯ ಇಂಧನ ಶಕ್ತಿ ಅನ್ವೇಷಣೆಯಲ್ಲಿ ಇತ್ತೀಚಿನ ಬೆಳವಣಿಗೆಯ ಕುರಿತು ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ಗುರುವಾರ ಕಾರ್ಯಾಗಾರ ನಡೆಯಿತು . ಮೂಡುಬಿದಿರೆ ಮೈಟ್ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಕೆ ಚಂದ್ರಶೇಖರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಜಿ ಡಿ’ಸೋಜಾ ಅಧ್ಯಕ್ಷತೆ ವಹಿಸಿ, ಪರ್ಯಾಯ ಇಂಧನ ವ್ಯವಸ್ಥೆ ನಮ್ಮ ಆಯ್ಕೆ ಪ್ರಮುಖವಾದದ್ದು. ಅಳವಾದ ಸಂಶೋಧನೆಯಿಂದ ಪರ್ಯಾಯ ಇಂಧನ ಶಕ್ತಿಯನ್ನು ನಾವು ಕಂಡುಕೊಳ್ಳಬಹುದು. ಇದಕ್ಕೆ ಪೂರಕವಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ಕೆಲವು ಸಂಕೀರ್ಣ ವಿಷಯಗಳನ್ನು ಸರಳಗೊರಿಸಿ ಅನ್ವೇಷಣೆಗೆ ನೆರವಾಗಬಹುದು ಎಂದರು.
ಡಾ.ಟಿ.ಕೆ ಚಂದ್ರಶೇಖರ್,ಸುರತ್ಕಲ್ ಎನ್ಐಟಿಕೆ ಸಹಾಯಕ ಪ್ರಾಧ್ಯಾಪಕ ಕುಮಾರ್ ಜಿ.ಎನ್, ಮಂಗಳೂರಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯೆನೆಪೋಯ ಕಾಲೇಜಿನ ಮೆಕ್ಯಾನಿಕ್ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಎನ್. ಸ್ವಾಗತಿಸಿದರು. ಅಬ್ದುಲ್ ಅಕ್ವೀದ್ ಕಾರ್ಯಕ್ರಮ ನಿರೂಪಿಸಿದರು. ಸುಶಿಲೇಂದ್ರ ದೇಸಾಯಿ ವಂದಿಸಿದರು.