ಬಂಟ್ವಾಳ: ವಿವಿಧ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಅನುದಾನ ಕೋರಿ ಬಂಟ್ವಾಳ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಬುಧವಾರ ಬಂಟ್ವಾಳ ಎಸ್.ಸಿ.ಎಸ್.ವೈ. ಸಭಾಂಗಣದಲ್ಲಿ 4ನೇ ಹಣಕಾಸು ಆಯೋಗ ಅಧ್ಯಕ್ಷ ಸಿ.ಜಿ.ಚಿನ್ನಸ್ಚಾಮಿ ಜನಪ್ರತಿನಿಧಿಗಳೊಂದಿಗೆ ಅಹವಾಲು ಸ್ವೀಕಾರ ನಿಗದಿಯಾಗಿತ್ತು. ಆದರೆ ಅವರ ಬದಲಿಗೆ ಆಗಮಿಸಿದ ನಾಲ್ಕನೇ ಹಣಕಾಸು ಆಯೋಗದ ಫೈನಾನ್ಸ್ ಮ್ಯಾನೇಜರ ಎಚ್.ಡಿ.ಅಮರನಾಥ್ ಅಹವಾಲು ಸ್ವೀಕರಿಸಿದರು.

sabhe-2

ಇವರು ದ.ಕ ಜಿಲ್ಲಾ. ಪಂ ಮಂಗಳೂರು, ತಾ. ಫಂ, ಬಂಟ್ವಾಳ  4ನೇ ರಾಜ್ಯ ಹಣಕಾಸು ಆಯೋಗ ಇದರ ವತಿಯಿಂದ ನಡೆದ ಜನಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆಯನ್ನು ಅ.9ರಂದು ಎಸ್.ಸಿ.ಎಸ್.ವೈ. ಸಭಾಂಗಣದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

sabhe-1

ನಾವು ಕೇವಲ ಅತಿಥಿಗಳಾಗಿ ಹೋಗುತ್ತೇವಷ್ಟೇ, ಅನುದಾನ ಒದಗಿಸುವ ಭರವಸೆ ನೀಡಬಹುದು ಆದರೆ ನಿಧಿಯೇ ಇಲ್ಲ ಎಂದು ಜನಪ್ರತಿನಿಧಿಗಳು ಅಳಲು ತೋಡಿಕೊಂಡರು. ಕಿಂಡಿ ಅಣೆಕಟ್ಟು, ಗಣಿಗಾರಿಕೆ, ನೀರು, ದೈವಸಾನ್ನಿಧ್ಯ ಗಳಿಗೆ ಅನುದಾನ ನೀಡಬೇಕು ಎಂಬ ಕೋರಿಕೆ ಬಂತು.

ನಾಲ್ಕನೇ ಹಣಕಾಸು ಆಯೋಗ ಸದಸ್ಯ ಡಾ.ಎಚ್.ಶಶಿಧರ್, ಸಮಾಲೋಚಕ ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಜಾಫರ್ ಶರೀಫ್,  ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಧನಲಕ್ಷ್ಮೀ, ಇಒ ಸಿಪ್ರಿಯನ್ ಮಿರಾಂಡ, ಅಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಸಹಿತ ವಿವಿಧ ಸದಸ್ಯರು ಅಹವಾಲು ಮಂಡಿಸಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ 10 ಲಕ್ಷ ಅನುದಾನ ಒದಗಿಸುವಂತೆ ಹಾಗು ಸಿಬ್ಬಂದಿ ಕೊರತೆ ನೀಗಿಸುವಂತೆ ಮನವಿ ಮಾಡಿದರು.

By suddi9

Leave a Reply

Your email address will not be published. Required fields are marked *