ಸುದ್ದಿ ಕೈಕಂಬ: ಗುರುಪುರ ,ಗಂಜಿಮಠ , ಕಂದಾವರ , ಮೂಡುಶೆಡ್ಡೆ ಈ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಜನಸ್ನೇಹಿ ಕಾರ್ಯಕ್ರಮದ ಉದ್ಘಟನಾ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವ ಅವರು ವಹಿಸಿದ್ದರು.

ಜಿಲ್ಲಾ ಪಂಚಾಯತ್ ಯೋಜನಾ ಶಾಖೆಯ ನೋಡಲ್ ಅಧಿಕಾರಿಯಾಗಿ ಸಂಧ್ಯ ಆಗಮಿಸಿದ್ದರು. ತಾಲೂಕು ಪಂಚಾಯತ್ ಸದಸ್ಯರಾದ ಜೊನ್ಸನ್ ಲೋಬೋ, ಸೆಲಿನ್ ಫೆನರ್ಾಂಡಿಸ್, ಗುರುಪುರ ಪಂಚಾಯತ್ ಅಧ್ಯಕ್ಷೆ ಪದ್ಮಿನಿ ಎಸ್ ಅಂಚನ್, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಗೋಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಪಿಡಿ.ಒ ರೋಹಿನಿ ಕಾರ್ಯಕ್ರಮ ನಿರೂಪಿಸಿದರು.