ಬಂಟ್ವಾಳ: ಸಮಾಜದಲ್ಲಿ ಶಿಸ್ತುಬದ್ಧ ಕ್ರೀಡೆಯು ಆರೋಗ್ಯದಾಯಕ ಜೀವನದ ಜೊತೆಗೆ ಸದೃಢ ಸಮಾಜ ನಿರ್ಮಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಮಾತ್ರವಲ್ಲದೆ ಕ್ರೀಡೆಯಿಂದ ಉದ್ಯೋಗ ಲಾಭದ ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಸಾಧನೆಗೆ ಅವಕಾಶ ಸಿಗುತ್ತದೆ ಎಂದು ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ ಹೇಳಿದ್ದಾರೆ.

siddakatte

ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವತಿಯಿಂದ ಎಣ್ಮಾಜೆ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ವಾರ್ಷಿಕ ಕೀಡಾಕೂಟದಲ್ಲಿ ಅವರು ಮಾತನಾಡಿದರು. ಸ್ಥಳದಾನಿ ಎಣ್ಮಾಜೆ ಮೋಹನ ಶೆಟ್ಟಿ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು. ಸಿದ್ಧಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಎ.ಗೋಪಿನಾಥ ರೈ, ಮಂಗಳೂರು ಮನ್‍ದೇವ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಚಿನ್ನಸ್ವಾಮಿ ಶೆಟ್ಟಿ, ಎಂಜಿನಿಯರ್ ಎಸ್.ವಿ.ನಾಯಕ್ ಮತ್ತಿತರರು ಶುಭ ಹಾರೈಸಿದರು.

ಶಾಲಾ ಸಂಚಾಲಕ ವಿಜಯ ಕುಮಾರ್ ಚೌಟ, ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್, ನಿತಿನ್, ಅಮೃತ, ಜಯ ನಾಯ್ಕ್, ಜೋಕಿಂ ಪಿಂಟೊ ಮತ್ತಿತರರು ಇದ್ದರು. ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೋ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿಯರಾದ ಲತಾ ವಂದಿಸಿ, ಶ್ರೀಶಂಕರಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *