ಬಂಟ್ವಾಳ: ಅಡುಗೆ ಅನಿಲ ಬಳಸುವಾಗ ಅನುಸರಿಸಬೇಕಾದ ಸುರಕ್ಷಾ ಬಗ್ಗೆ ಶ್ರೀ ಶೈಲಾ ಭಾರತ್ ಗ್ಯಾಸ್ ಏಜೆನ್ಸಿ ಕಲ್ಲಡ್ಕ ಇವರ ವತಿಯಿಂದ ಸುರಕ್ಷತಾ ಶಿಬಿರ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು. ಕೆ.ಜಗನ್ನಾಥ ಚೌಟ ಅವರು ಫಲಾನುಭವಿಗಳಿಗೆ ಅಡುಗೆ ಅನಿಲದ ಬಳಕೆಯ ಸಂದರ್ಭ ಮಾಡಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಶ್ರೀ ಶೈಲಾ ಭಾರತ್ ಗ್ಯಾಸ್ ನ ಮಾಲಕಿ ಚರಿಷ್ಮಾ ರೈ ಅವರು ಉಪಸ್ಥಿತರಿದ್ದರು.