ಕಡೆಗೋಳಿ ಕಲೆಗೆ ವಿಶೇಷ ವಾದ ಶಕ್ತಿ ಇದೆ , ಮಕ್ಕಳನ್ನು ಶಿಕ್ಷಣ ದೊಂದಿಗೆ ನಾಟಕ ಕಲೆ , ನೃತ್ಯ ಕಲೆ ಯಂತಹ ಚಟುವಟಿಕೆ ಗೆ ಹಚ್ಚಿದರೆ ಚುರುಕಾಗಿರುತ್ತಾರೆ , ನಾಟಕ ಮನೋರಂಜನೆ ಯೊಂದಿಗೆ ಆತ್ಮರಂಜನೆ ಹೊಂದಿರುತ್ತದೆ , ಬದುಕಿನ ಬದಲಾವಣೆ ಗೆ ಪೂರಕ ಅಲ್ಲದೆ ಕಲಾವಿದನು ಬೇನೆ ಯನ್ನು ತನ್ನಲ್ಲಿಟ್ಟುಕೊಂಡು ಸಮಾಜಕ್ಕೆ ಸಂದೇಶ ಕೊಡುವಂತಹ ಶಕ್ತಿ ಹೊಂದಿರುತ್ತಾನೆ ಎಂದು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಯ ಪ್ರದಾನ ಸಂಚಾಲಕರಾದ ಶ್ರೀ ತಾರಾನಾಥ್ ಕೊಟ್ಟಾರಿ ಯವರು ಸಂಸೃತಿ ಕಲಾ ತಂಡ ಕಡೆಗೋಳಿ ಇದರ ಉದ್ಘಾಟನೆ ಸಮಾರಂಭ ದ ಮುಖ್ಯ ಅಥಿತಿ ಗಳಾಗಿ ಮಾತನಾಡಿದರು ,

IMG_9667ಶ್ರೀ ಸತ್ಯಪಾಲ ರೈ ಕಡೆಂಜ ಸಂಚಾಲಕರು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಬಪ್ಪನಾಡು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು .ಕೊಡಮಣ್ಣು ಕಾಂತಪ್ಪ ಶೆಟ್ಟಿ ಅಧ್ಯಕ್ಷರು ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇವರು ಸಭೆಯ ಅಧ್ಯಕ್ಷತೆ ವಹಿಸಿಕೊಡಿದ್ದರು , ವೇದಿಕೆಯಲ್ಲಿ ಮನೋಜ್ ಆಚಾರ್ಯ ನಾಣ್ಯ , ಶಾಂತ ಡಿ ಚೌಟ , ವಿಠ್ಠಲ ಸಾಲ್ಯಾನ್ , ಸಂಸೃತಿ ಕಲಾ ತಂಡ ಕಡೆಗೋಳಿ ಅದರ ಅಧ್ಯಕ್ಷರಾದ ಶ್ರೀಮತಿ ರಮ್ಯಾ ಸುನಿಲ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು , ಕಾರ್ಯದರ್ಶಿ ಅಭಿಷೇಕ್ ಅರ್ಕುಳ ವಂದಿಸಿದರು ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *