ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯು ಎಸ್ ಕೆ ಯು ಏಷಿಯನ್ ಕರಾಟೆ ಓಪನ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಟ್ಲದ ವಿಠಲ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಭೂಷಣ್ ಹೆಚ್ ವೈಯಕ್ತಿಕ ಟೀಮ್ ಕಟಾಸ್ ವಿಭಾಗದಲ್ಲಿ ಸ್ಥಾನ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರು ಕೆಲಿಂಜ ಹೆಗ್ಡೆಕೋಡಿ ದಾಮೋಧರ ಮತ್ತು ಉಮಾವತಿ ದಂಪತಿಗಳ ಪುತ್ರ. ಮಾಧವ ಅಳಿಕೆ ಇವರ ಶಿಷ್ಯ.
