ಕೈಕಂಬ: ಭಗವಂತನನ್ನು ನಾವೂ ಬಿಂಬದ ರೂಪದಲ್ಲಿ ಏಕಾಗ್ರತೆಯಿಂದ ನೋಡಿದಾಗ ಪ್ರತಿಬಿಂಬಗಳಾದ ನಾವು ದೇವರನ್ನು ಕಾನಲು ಸಾಧ್ಯ. ದೇವರ ದ್ಯಾನ ಮಾಡಿದರೆ ನಮಗೆ ಸಂತೋಷ ನೆಮ್ಮದಿ ಮನಶಾಂತಿ ಪ್ರಾಪ್ತಿಯಾಗುತ್ತದೆ.ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದಾಗ ಊರಿನ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕಲುಸಾಧ್ಯ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. 3-7

1-4

 

 

 

 

 

 

3-5

3-6

3-7

ಅಧ್ಯಕ್ಷತೆಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ವಹಿಸಿದ್ದರು.

3-12ನಾವು ಶುದ್ದ ಮನಸ್ಸಿನಲ್ಲಿ ದೇವರನ್ನು ಆರಾಧಿಸಿದಾಗ ನಮ್ಮನ್ನು ದೇವರು ಅನುಗ್ರಹಿಸುತ್ತಾನೆ ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಅಸ್ರಣ್ಣ ನುಡಿದರು.

ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ನೆರವೇರಿಸಿದರು.
ಪರಿಸರವಾದಿ ಚಿಂತಕ ಎಂ.ಜಿ.ಹೆಗಡೆ ಧಾರ್ಮಿಕ ಉಪನ್ಯಾಸ

222

1-2

3-11

3-10ಮುಖ್ಯ ಅತಿಥಿಗಳಾಗಿ ಚಂದ್ರಾಹಾಶ ರೈ,ತಿರುವೈಲ್ ವಾರ್ಡ್ ಕಾಪೋರೇಟರ್ ಹೇಮಲತಾ ರಘು ಸಾಲ್ಯಾನ್ ,ಗುರುಪುರ ಬಂಟರ ಸಂಘದ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ,ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ,ಮಾಜಿ ತಾ. ಪಂ ಸದಸ್ಯಯೂಸೂಫ್ , ವಾಮಂಜೂರು ಬ್ರಹ್ಮ ಶ್ರೀನಾರಾಯಣ ಗುರು ಸಂಘದ ಅಧ್ಯಕ್ಷ ಮೋಹನ್‍ದಾಸ್ ಬಂಗೇರಾ. ಬಾಂಡೂಪ್ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಜಯ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಪಡುಪಳ್ಳಿ ಶರತ್ ಶೆಟ್ಟಿ ಸ್ವಾಗತಿಸಿ ರುಕ್ಮಯ ವಂದಿಸಿ ಸುಕೇಶ್ ಚೌಟ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *