ಬಂಟ್ವಾಳ: ಗ್ರೀನ್ ಶೇಡ್ ಕ್ರಿಕೆಟರ್ಸ್ ವತಿಯಿಂದ ಬೆಳ್ಳಿಹಬ್ಬದ ಪ್ರಯುಕ್ತ ಕ್ರಿಕೆಟ್ 2 ದಿನಗಳ ಪಂದ್ಯಾಟವು ತುಂಬೆ 10ಎಕ್ರೆ ಮೈದಾನದಲ್ಲಿ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಪಂದ್ಯಾಟವನ್ನು ಉದ್ಘಾಟಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಬದಲ್ಲಿ ಜಿ.ಪಂ.ಸದಸ್ಯ ರ ವೀಂದ್ರ ಕಂಬಳಿ, ತಾ.ಪಂ.ಸದಸ್ಯ ಗಣೇಶ ಸುವರ್ಣ, ಕೆ.ಪಿಸಿಸಿ ಕಾರ್ಮಿಕ ಘಟಕ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ, ಇರಾ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ರಝಾಕ್ ತುಂಬೆ, ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲಕೃಷ್ಣ ತುಂಬೆ, ದೇವದಾಸ ತುಂಬೆ , ಮಹಮ್ಮದ್ ಕಮಾಲ್ ಮತ್ತಿತರರು ಉಪಸ್ಥಿತರಿದ್ದರು. ಯಂಗ್ ಫ್ರೆಂಡ್ಸ್ ಅಮೆಮಾರ್ ತಂಡವು ಪ್ರಥಮ ಸ್ಥಾನವನ್ನು ಪಡೆದು ,ವಳವೂರು ಇಲೆವೆನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
