ಮೂಡುಬಿದಿರೆ : ಎ.14ರ ಶುಕ್ರವಾರ ಗುಡ್‍ಪ್ರೈಡೇ ದಿನದಂದು ಮಂಗಳೂರು ತಾಲೂಕಿನ ಹೊಸಬೆಟ್ಟು ಗ್ರಾಮದ ಕರಿಂಗಾನ ಎಂಬಲ್ಲಿ ಕ್ರೈಸ್ತ ಕುಟುಂಬವೊಂದರ ತಂದೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದು ತಂದೆ ಸಾವನ್ನಪ್ಪಿದ್ದು, ಮಗ ಗಂಭೀರ ಗಾಯಗೊಂಡು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

WhatsApp Image 2017-04-15 at 10.36.10 AM

WhatsApp Image 2017-04-15 at 10.36.13 AM
ಇಲ್ಲಿನ ಶೇಡಿಗುರಿ ಚೈತನ್ಯ ಯುವಕ ಮಂಡಲದ ಹತ್ತಿರದ ನಿವಾಸಿಯಾಗಿದ್ದ ಪೌಲ್ ಗೋವಿಯಸ್ (82) ಕೊಲೆಯಾದ ವ್ಯಕ್ತಿ. ಕೊಲೆಯಾದ ವ್ಯಕ್ತಿಯ ಪುತ್ರ ಸ್ಕ್ಯಾನಿ ಗೋವಿಯಸ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.  ಎ.14ರ ಶುಕ್ರವಾರ ಗುಡ್‍ಫ್ರೈಡೇ ಆದುದರಿಂದ ಹೊಸಬೆಟ್ಟು ಚರ್ಚ್‍ನಲ್ಲಿ ಸಂಜೆ 5 ಗಂಟೆಯಿಂದ 7.45ರವರೆಗೆ ಪೂಜಾ ಕಾರ್ಯಕ್ರಮಗಳು ನಡೆಯುತ್ತಿತ್ತು. ಈ ಸಂದರ್ಭ ವಯೋವೃದ್ಧರಾಗಿದ್ದ ತನ್ನ ತಂದೆ ಪೌಲ್ ಗೋವಿಯಸ್ ಅವರನ್ನು ಪುತ್ರ ಸ್ಕ್ಯಾನಿ ಮನೆಯಲ್ಲಿ ಬಿಟ್ಟು ಮನೆಗೆ ಹೊರಗಿನಿಂದ ಬೀಗ ಹಾಕಿ ಚರ್ಚ್‍ಗೆ ಹೋಗಿದ್ದರು. ರಾತ್ರಿ 7.45ಕ್ಕೆ ಚರ್ಚ್‍ನಲ್ಲಿ ಪೂಜಾ ಕಾರ್ಯಕ್ರಮಗಳು ಕೊನೆಗೊಂಡ ಮೇಲೆ ಮನೆಗೆ ತೆರಳಿದ ಸಂದರ್ಭ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಂದೆಯನ್ನು ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಸ್ಕ್ಯಾನಿ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.

ಪೌಲ್ ಗೋವಿಯಸ್‍ರ ಪತ್ನಿ ಎರಡು ವರ್ಷದ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನೇಣು ಹಾಕಿದ ಸ್ಥಿತಿಯಲ್ಲಿದ್ದ ಪೌಲ್ ಗೋವಿಯಸ್‍ರ ಪತ್ನಿಯದ್ದು ಕೊಲೆಯೆಂಬ ಸಂಶಯವನ್ನು ಕುಟುಂಬಸ್ಥರೇ ವ್ಯಕ್ತಪಡಿಸಿದ್ದರು. ಇದೀಗ ಕೊಲೆಯಾಗಿರುವ ಪೌಲ್ ಗೋವಿಯಸ್‍ರಿಗೆ ಒಟ್ಟು 5 ಮಂದಿ ಮಕ್ಕಳಿದ್ದು, ಅದರಲ್ಲಿ ಇಬ್ಬರು ಪುತ್ರರ ನಡುವೆ ಜಾಗದ ವಿಷಯದಲ್ಲಿ ತಕರಾರಿದೆ. ಒಂದುವರೆ ತಿಂಗಳ ಹಿಂದೆಯಷ್ಟೇ ಪೌಲ್ ಗೋವಿಯಸ್ ತನ್ನ ಒಬ್ಬ ಪುತ್ರಿಗೆ ತನ್ನ ವಶದಲ್ಲಿದ್ದ ಜಾಗವನ್ನು ರಿಜಿಸ್ಟ್ರಾರ್ ಮಾಡಿಸಿ ಮನೆಯಲ್ಲಿ ತನ್ನ ಜೊತೆಗಿದ್ದ ಪುತ್ರ ಸ್ಕ್ಯಾನಿಯ ಹೆಸರಿಗೆ ಪವರ್ ಆಫ್ ಅಟಾರ್ನಿ ಮಾಡಿಸಿಕೊಟ್ಟಿದ್ದರು. ಇನ್ನೊಬ್ಬ ಪುತ್ರ ಮೂಡುಬಿದಿರೆಯ ಉದ್ಯಮಿ ಡಾಲ್ಪಿ ಗೋವಿಯಸ್ ಹಾಗೂ ಕೊಲೆಯಾದ ಪೌಲ್ ಗೋವಿಯಸ್ ಮಧ್ಯೆ ಜಾಗದ ತಕರಾರು ಕೋರ್ಟಿನಲ್ಲಿತ್ತು. ಈ ಸಂಬಂಧವಾಗಿ ಸ್ಕ್ಯಾನಿ ಹಾಗೂ ಪೌಲ್ ಇಬ್ಬರೂ ಆಗಿದ್ದಾಂಗ್ಗೆ ಕೋರ್ಟಿಗೆ ಹೋಗಿ ಬರುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಆಸ್ತಿ ವಿವಾದವೇ ಕೊಲೆಗೆ ಕಾರಣವಾ? ಎಂಬುದು ಇನ್ನೂ ಖಚಿತಗೊಂಡಿಲ್ಲ. ಕೊಲೆಯಾದ ಪೌಲ್‍ರ ಮೂವರು ಪುತ್ರಿಯರಲ್ಲಿ ಜಾನೆಟ್ ಎಂಬವರು ಮುಂಬೈಯಲ್ಲಿದ್ದು, ಪೆಲ್ಸಿ ಎಂಬಾಕೆ ಕೆನಾಡಾ ಹಾಗೂ ವೈಲೆಟ್ ಎಂಬವರು ಉತ್ತರ ಪ್ರದೇಶದಲ್ಲಿ ಸಿಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *