ಕೈಕಂಬ: ಯೋಗ ದೇಶವಿದೇಶಗಳ ನಡುವೆ ಸಂಬಂಧ ಬೆಸೆಯುವ ಸಾಧನವಾಗಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು. ಅವರು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬುಧವಾರ ಶ್ರೀ ಪತಾಂಜಲಿ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 3ನೇ ಅಂತರಾಷ್ಟ್ರೀಯ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪತಾಂಜಲಿ ಯೋಗ ಶಿಕ್ಷಣ ಟ್ರಸ್ಟ್ನ ಸ್ಥಾಪಕ ರಾಮ ಸ್ವಾಮಿ ಮಾತನಾಡುತ್ತಾ ಯೋಗ ಜೀವನ ಅನುಷ್ಠಾನದಿಂದ ಮನುಷ್ಯನ ಏಳ್ಗೆ ಸಾಧ್ಯ ಎಂದರು ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಅವರು ಆರ್ಥಿಕ ಹಿಂಜರಿತದಿಂದ ಹೊರಬರಲು ಸಹಾ ಯೋಗ ಸಾಧನ ಎಂದರು. ವೇದಿಕೆಯಲ್ಲಿ ಪೊಳಲಿ ದೇವಳದ ಅರ್ಚಕ ನಾರಾಯಣ ಭಟ್ , ಉಧ್ಯಮಿ ಜಯರಾಮಕೃಷ್ಣ ಪೊಳಲಿ, ವಿಶ್ವೇಶ್ವರ ಭಟ್ ಕಾಂಜಿಲಕೋಡಿ ಉಪಸ್ಥಿತರಿದ್ದರು. ಜಯಶ್ರೀ ಸ್ವಾಗತಿಸಿ.ಕೀರ್ತನ ವಂದಿಸಿದರು ದಿನೇಶ್ ಕಾರ್ಯಕ್ರಮ ನಿರೂಪಿಸಿದರು.




