ಬಂಟ್ವಾಳ: ನಮ್ಮ ಗ್ರಾಮ ನಮ್ಮ ರಸ್ತೆ ಹಂತ 4 ಗಾಂಧಿಪಥ-ಗ್ರಾಮ ಪಥ ಯೋಜನೆಯಡಿ 2.35 ಕೋಟಿ ರುಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಪಲ್ಲಿಪಾಡಿ-ಕಂಡದಬೆಟ್ಟು- ಸಾಣೂರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಅರಣ್ಯ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.

3 vp rai

3-8

3-10

3 chandras

3 sadashiva

3 yasavanth

3-7

3 -5

3-6ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ರಸ್ತೆ ನಿರ್ಮಾಣದ ಮೂಲಕ ಈ ಊರಿಗೆ ಅಭಿವೃದ್ದಿಯ ಬೆಳಕು ಮೂಡಿದೆ. ಹಲವು ವರ್ಷಗಳ ಬೇಡಿಕೆ ಈಗ ನನಸಾಗಲಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ. ಪಂ. ಸದಸ್ಯ ಯಶವಂತ ಪೂಜಾರಿ ಮಾತನಾಡಿದರು. ಬಡಗ ಬೆಳ್ಳೂರು ಪಂಚಾಯಿತಿ  ಉಪಾಧ್ಯಕ್ಷ ಯೋಗೀಶ್ ಸೂರ್ಲ, ಬಡಗಬೆಳ್ಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಸಂತ,  ಕರಿಯಂಗಳ ಬ್ಲಾಕ್  ಕಾಂಗ್ರೇಸ್ ಅಧ್ಯಕ್ಷ ಉಮೇಶ್   ಆಚಾರ್ಯ,  ಕರಿಯಂಗಳ  ಗ್ರಾ. ಪಂ . ಸದಸ್ಯ ಕಿಶೋರ್ ಪಲ್ಲಿಪಾಡಿ, ಬಡಗಬೆಳ್ಳೂರು ಗ್ರಾ. ಪಂ ಸದಸ್ಯ ಮೋಹನ್ ಶೆಟ್ಟಿ, ಗುತ್ತಿಗೆದಾರ ಪ್ರೇಮನಾಥ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಳ್, ಜನಾರ್ದನ ಚೆಂಡ್ತಿಮಾರ್, ಸಿದ್ದೀಕ್ ಗುಡ್ಡೆಯಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ ಪ್ರಾಸ್ತಾಪಿಸಿದರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯಾನಂದ ಪೂಜಾರಿ ತಾಂತ್ರಿಕ ಪ್ರಸ್ತಾವನೆ ನೀಡಿದರು. ಸಂಕೇಶ್ ಮಾಂಟ್ರಾಡಿ ಕಾರ್ಯ ಕ್ರಮ  ನಿರೂಪಿಸಿದರು. ಪಿಡಿಓ ರೀಟಾ ಡಿ” ಸೋಜ  ವಂದಿಸಿದರು.

By suddi9

Leave a Reply

Your email address will not be published. Required fields are marked *