ಉಡುಪಿ: ಜೇಸಿಐ ಉಡುಪಿ ಸಿಲ್ವರ್ಸ್ಟಾರ್ ಮತ್ತು ಭಾಂಧವ್ಯ ಬ್ಲಡ್ ಕರ್ನಾಟಕ ಇದರ ವತಿಯಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜೂನ್ 7 ಬುಧವಾರ ಮುಕುಂದ ಕೃಪಾ ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜೇಸಿ ವಲಯಾದ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಬಳಸಿ ಮುಂದಿನ ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದರು.
ಅದ್ಯಕ್ಷತೆಯನ್ನು ಜ್ಯೋತಿ ರಾಮನಾಥ ಶೆಟ್ಟಿ ವಹಿಸಿದ್ದರು.ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮುಕ್ತಾ ಶೆಣ್ಯೆ,ಭಾಂದವ್ಯ ಅದ್ಯಕ್ಷ ದಿನೇಶ್ ಭಾಂದವ್ಯ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೇಸಿ ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು,ಶ್ರೀನಿವಾಸ ಜಿ,ಆವಿನಾಶ್ ಕಾಮತ್,ಧಿಕ್ಷಿತ್ ಭಾಂದವ್ಯ ಸದಸ್ಯರು ಭಾಗವಹಿಸಿದ್ದರು.