ಬಂಟ್ವಾಳ: ತಾಲೂಕಿನ ಶೇರಾ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಪುಸ್ತಕವನ್ನು ವಿತರಿಸಲಾಯಿತು.ಕಡೇಸ್ವಾಲ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಲೆಯ ಸರ್ವೋತೋಮುಖ ಅಭಿವ್ರದ್ದಿಗೆ ಸಹಕರಿಸುವಂತೆ ಕೋರಿದರು.ಕಡೇಶ್ವಾಲ್ಯ ಕ್ಲಸ್ಟರ್ ಮುಖ್ಯಸ್ಥೆ ಜಯಲಕ್ಕ್ಮಿ, ,ಪಂ.ಸದಸ್ಯೆ ಕು.ಸೇಸಮ್ಮ,ಬೀಡಿ ಉದ್ಯಮಿ ಗಂಗಾಧರ್ ಎಸ್,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಚೆನ್ನಪ್ಪ ಎಸ್.ಅಂಚನ್,ಬರಿಮಾರು ಗ್ರಾ.ಪಂ.ಉಪಾಧ್ಯಕ್ಷೆ ಅನಿತಾ ವೇದಿಕೆಯಲ್ಲಿದ್ದರು.ಇದೇ ವೇಳೆ ಸಹಕರಿಸಿದ ವಿದ್ಯಾರ್ಥಿಗಳಿಗೆ ಕ್ರತಜ್ಙತೆ ಸಲ್ಲಿಸಲಾಯಿತು.ಶಾಲಾ ಮುಖ್ಯ ಶಿಕ್ಷಕಿ ಕೋಮಲಾಂಗಿ ಸ್ವಾಗತಿಸಿದರು. ವಿಜಯಲಕ್ಮಿ ನಿರೂಪಿಸಿ ,ವಂದಿಸಿದರು.ಶಿಕ್ಷಕಿಯರಾದ ಸುವರ್ಣಲತಾ,ಸುಮಲತಾ ಸಹಕರಿಸಿದರು.
