ಬಂಟ್ವಾಳ ; ಸಾಮರಸ್ಯವೇ ನಮ್ಮ ಬದುಕಾಗಬೇಕು, ಉಸಿರಾಗಬೇಕು ಆಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪವಿತ್ರ ರಂಝಾನ್ ಉಪವಾಸದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶನಿವಾರ ಸಂಜೆ ಬಿ.ಸಿ.ರೋಡು ಅಲ್‍ಖಝಾನಾ ಹಾಲ್ ನಲ್ಲಿ ಆಯೋಜಿಸಲಾದ ಇಫ್ತಾರ್ ಸೌಹಾರ್ದ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರ ಮನಸ್ಸಿಗೆ ಪ್ರೀತಿಯನ್ನು ಹಂಚುವ ಮನಸ್ಸನ್ನು ಅಲ್ಲಾಹನು ದಯಪಾಲಿಸಲಿ ಎಂಬುದು ನಮ್ಮ ಪ್ರಾರ್ಥನೆ ಎಂದರು. ಮತೀಯವಾದಿಗಳಿಂದಾಗಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಪ್ರಜ್ಞಾವಂತ ಜನಸಮೂಹ ಜಾಗೃತರಾಗಬೇಕು, ಸಾಮರಸ್ಯ ತುಂಬಿದ ಸಮಾಜ ನಿರ್ಮಾಣಕ್ಕೆ ಜಿಲ್ಲೆಯ ಜನತೆಯೊಂದಿಗೆ ತಾನು ಸದಾ ಜತೆಯಾಗಿರುವುದಾಗಿ ಅವರು ತಿಳಿಸಿದರು.
ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಸಚಿವ ರೈ ಯವರು ಇಫ್ತಾರ್ ಕೂಟವನ್ನು ಪ್ರತೀವರ್ಷ ಆಯೋಜಿಸುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ನೀಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಇರ್ಷಾದ್ ಉಸ್ತಾದ್ ದುಃವಾ ನೆರವೇರಿಸಿದರು, ಹಬೀಬ್ ಉಸ್ತಾದ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಕಾಂಗ್ರೇಸ್ ಮುಖಂಡ ಹರೀಶ್ ಕುಮಾರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಶಾಹುಲ್ ಹಮೀದ್, ಪದ್ಮಶೇಖರ ಜೈನ್, ಮಾಜಿ ಜಿ.ಫಂ.ಸದಸ್ಯ ಉಮ್ಮರ್ ಫಾರೂಕ್, ಬೇಬಿಕುಂದರ್, ಪದ್ಮನಾಭ ರೈ ವೇದಿಕೆಯಲ್ಲಿದ್ದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು, ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಐಕ್ರಮ ನಿರ್ವಹಿಸಿ ವಂದಿಸಿದರು.

