ಬಂಟ್ವಾಳ :ರಾ.ಹೆ.ಪ್ರಾ.ಇಲಾಖೆ ಬಿ.ಸಿ.ರೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಬಸ್ ನಿಲ್ದಾಣದ ಮುಂಭಾಗದಲ್ಲಿ ಶುಕ್ರವಾರ ಸಂಜೆ ವಾಹನ ಚಾಲಕರನ್ನು ಗೊಂದಲಕ್ಕೆ ತಳ್ಳಿ ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ ಅಳವಡಿಸಲಾಗಿದ್ದ ರಸ್ತೆ ವಿಭಾಜಕ ಕೋನ್ ನನ್ನು ಶನಿವಾರ ತೆರವುಗೊಳಿಸಿದೆ. ರಾ.ಹೆ. ಪ್ರಾಧಿಕಾರದ ಈ ಅಸಂಬದ್ದ ಮತ್ತು ಅವೈಜ್ಙಾನಿಕ ಟ್ರಾಫಿಕ್ ವ್ಯವಸ್ಥೆಗೆ ಚಾಲಕರ ಸಹಿತ ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು .. ಶನಿವಾರ ಬೆಳಿಗ್ಗೆ ಇಲ್ಲಿ ಚಾಲಕರಿಗೆ ಗೊಂದಲಕ್ಕೆ ತಳ್ಳುತ್ತಿದ್ದ ರಸ್ತೆ ವಿಭಾಜಕ ಕೋನ್ ಗಳನ್ನು ತೆರವುಗೊಳಿಸಿ ಈ ಹಿಂದಿನಂತೆ ಸಂಚಾರಕ್ಕೆ ಅನುವು ಮಾಡಲಾಗಿದೆ.

20170617_172707 20170617_172724ಈಮೊದಲು ಇಲ್ಲಿನ ಅಜ್ಜಿಬೆಟ್ಟ ರಸ್ತೆಯ ನಾಗರಿಕರಿಗೆ ಮತ್ತು ವಾಹನಗಳು ತಿರುವ ಪಡೆಯಲೆಂದು ಡಿವೈಡರ ಮಧ್ಯೆ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು . ಆದೇ ಜಾಗದ ಸುತ್ತ ಶುಕ್ರವಾರ ಸಂಜೆ ರಾ.ಹೆ.ಪ್ರಾ.ಇಲಾಖೆ ಹಠಾತ್ತನೆ ರಸ್ಥೆ ವಿಭಾಜಕ ಕೋನ್ ಗಳನ್ನು ಅಳವಡಿಸಿದರಿಂದ ವಾಹನ ಸವಾರರು ಗೊಂದಲಕ್ಕೆ ಸಿಲುಕಿ ಪರಾದಾಡಿದ್ದರು. ಈಬಗ್ಗೆ ವ್ಯಾಪಕ ಟೀಕೆಯು ವ್ಯಕ್ತವಾಗಿತ್ತು. ಇದೀಗ ಸೂಚನಾಫಲಕವನ್ನು ಅಲ್ಲಿಂದ ತೆರವು ಗೊಳಿಸಿ ಮಡಚಿಡಲಾಗಿದೆ.ಹಾಗೆಯೇ ರಾತ್ರಿ ವೇಳೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಸಂಚರಿಸುವ ಬಸ್ ಮತ್ತಿತರ ಘನ ವಾಹನಗಳ ಸಂಚಾರದ ಭರಾಟೆಗೆ ವಿಭಾಜಕ ಕೋನ್ ಗಳು ಚಕ್ರದಡಿಗೆ ಸಿಲುಕಿ ಅಪ್ಪಚ್ಚಿಯಾಗಿದೆ. ಈನಡುವೆ ಮೇಲ್ಸತುವೆಯಲ್ಲಿ ದ್ವಿಪಥ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಇಲ್ಲೂ ಕೂಡ ರಸ್ತೆ ವಿಭಾಜಕ ಕೋನ್ ಹಾಕಲಾಗಿದೆ.

By suddi9

Leave a Reply

Your email address will not be published. Required fields are marked *