ಬಂಟ್ವಾಳ: ಕೊಳ್ನಾಡು ಗ್ರಾಮ ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಜೂ. 25ರಂದು ಬೆಳಿಗೆ 8ಗಂಟೆಯಿಂದ 11ಗಂಟೆ ತನಕ ಅನುಜ್ಞಾ ಕಲಶ ವೈದಿಕ ವಿ„ಗಳು, ಬಳಿಕ ಧಾರ್ಮಿಕ ಸಭೆ ನಡೆಯಲಿದೆ.
ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮಿಜಿ ಆಶೀರ್ವಚನ ನೀಡುವರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ, ಡಾ| ಶ್ರೀಧರ ಭಟ್ ಮಾವೆ, ನಿವೃತ್ತ ಸೈನಿಕ ರಂಗನಾಥ ರೈ ಬಿಳಿಯೂರುಗುತ್ತು, ಮನಪಾ ಸುರತ್ಕಲ್ ವಲಯ ಆಯುಕ್ತೆ ರೇಖಾ ಶೆಟ್ಟಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.ತಂತ್ರಸ್ಥಾನ ಮನೆತನದ ಮಂಕುಡೆ ರಾಮಣ್ಣ ಆಚಾರ್ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ವಿ„ವಿಧಾನಗಳು ನಡೆಯಲಿದೆ.ಅನುಜ್ಞಾ ಕಲಶ ಪೂರ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಆಚಾರ್ಯಾವರಣ, ಶ್ರೀ ಮಹಾಗಣಪತಿ ಹೋಮ,ಅನುಜ್ಞಾ ಕಲಶ ಪೂಜೆ, ಪ್ರಾರ್ಥನೆ ನಡೆಯುವುದು. ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ದೇವಳದ ಜೀರ್ಣೋದ್ಧಾರ ಪೂರ್ವದಲ್ಲಿ ಮಂಚಿ ಇರಾ ಬೋಳಂತೂರು ಕೊಳ್ನಾಡು ಸಾಲೆತ್ತೂರು ಗ್ರಾಮಗಳ ಎಲ್ಲಾ ಹಿಂದುಗಳ ಮನೆಯಿಂದ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಜೀರ್ಣೋದ್ಧಾರ ಸಮಿತಿ ಗೌ. ಅಧ್ಯಕ್ಷ ಟಿ. ಶ್ಯಾಮ್ ಭಟ್ ಪಾಲ್ಗೊಳ್ಳುವರು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *