ಶ್ರೀ ಉಮಾಮಹೇಶ್ವರ ಸಾಮಾಜಿಕ ಸಹಾಯ ಸಂಘದ ಉದ್ಘಾಟನೆಯು ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕೊಡಿಂಬಾಡಿ ಅಶೋಕ್ ಕುಮಾರ್ ರೈ ಯವರ ರೈ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಇದರಿಂದ ಪ್ರೇರೇಪನೆಗೊಂಡು ಸ್ಥಾಪನೆಯಾದ ಈ ಸಂಘದ ಸದಸ್ಯರು ಪ್ರತಿ ತಿಂಗಳು 100 ರೂಪಾಯಿಯಂತೆ ಸಂಘಕ್ಕೆ ನೀಡಿ ಆ ಮೊತ್ತವನ್ನು ಸಮಾಜದ ಬಡವರ ಶಿಕ್ಷಣ, ಆರೋಗ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಕಾರ್ಯಕ್ಕೆ ಬಳಸುವುದು ಸಂಧಗ ಗುರಿ.

1 (1)ಪ್ರಥಮ ಕಂತನ್ನು ಬೊಳಂತಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸಂಜೀವ ನಾಯ್ಕ ರವರಿಗೆ ಮೈಸೂರಿನ ಹಿರಿಯ ಉದ್ಯಮಿ ಮೋಹನ್ ರಾಜ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಪದ್ಮನಾಭ ಕೋಂಕೋಡಿ, ಸದಾಶಿವ ಆಚಾರ್ಯ, ಕೆ ಪಿ ಪ್ರಕಾಶ್ ಕೆದಿಲಾಯ, ಸಿ ಕೆ ಗೌಡ ಇರಂದೂರು, ಸಂಕಪ್ಪ ಗೌಡ ಕೈಂತಿಲ, ಸಂಜೀವ ಪೂಜಾರಿ ಕೈಂತಿಲ, ವಿಶ್ವನಾಥ ನಾಯ್ತೊಟು, ವೀರಪ್ಪ ಗೌಡ ರಾಯರಬೆಟ್ಟು, ಕರುಣಾಕರ ನಾಯ್ತೊಟು, ನಾರಾಯಣ ಮಾಮೇಶ್ವರ, ಉದಯಕುಮಾರ್ ನಾಯ್ತೊಟು, ನವೀನಚಂದ್ರ ಬಳ್ನಾಡು, ಸಂಘದ ಅಧ್ಯಕ್ಷ ಪ್ರಶಾಂತ್ ಅಡ್ಡಾಳಿ, ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮನೋರಾಜ್ ಕೈಂತಿಲ ಸ್ವಾಗತಿಸಿದರು, ರವಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸಂಪತ್ ಮಾಮೇಶ್ವರ ವಂದಿಸಿದರು.

By suddi9

Leave a Reply

Your email address will not be published. Required fields are marked *