ಮಂಗಳೂರು: ಇಲ್ಲಿನ ಪಜೀರ್ ಅಡ್ಕ ಎಂಬಲ್ಲಿ ದನ ಕಡಿದು ಮಾಂಸ ಮಾಡುತ್ತಿದ್ದವರ ಮೇಲೆ ಮಾಹಿತಿ ತಿಳಿದು ದಾಳಿ ನಡೆಸಿದ್ದ ಬಜರಂಗದಳದ ಕಾರ್ಯಕರ್ತರು ಮಾರಕಾಯುಧದಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.201706252143286326_Five-Bajrang-Dal-leaders-arrested-in-Mangaluru-for-attack-on_SECVPF

ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡವರನ್ನು ಪಜೀರ್‌ ಮತ್ತು ಪಾವೂರು ನಿವಾಸಿಗಳಾದ ಹಂಝ, ಸಲಾಂ ಮತ್ತು ಇಕ್ಬಾಲ್ ಎಂದು ಗುರುತಿಸಲಾಗಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನಿನ್ನೆ ಈದ್ ಹಬ್ಬ ಘೋಷಣೆಯಾದಂತೆ ತಂಡವೊಂದು ಪಜೀರ್ ಅಡ್ಕದಲ್ಲಿರುವ ಕ್ರೈಸ್ತರಿಗೆ ಸೇರಿದ ಜಾಗದಲ್ಲಿ ದನ ಕಡಿದು ಮಾಂಸ ಮಾಡುತ್ತಿತ್ತು ಎನ್ನಲಾಗಿದೆ. ಮಾಹಿತಿ ಅರಿತ ಬಜರಂಗದಳದ ಕಾರ್ಯಕರ್ತರ ತಂಡ ಮಾರಕಾಯುಧದೊಂದಿಗೆ ಘಟನಾ ಸ್ಥಳಕ್ಕೆ ಬಂದು ಕಸಾಯಿ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದೆ.ಹಲ್ಲೆಯಿಂದ ಮೂವರು ಗಂಭೀರ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐವರ ಬಂಧನ:ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂದಿಸಿದ್ದಾರೆ. ಶಾನ್‌ ಕುಮಾರ್ (22), ಪುರಂದರ 31), ಸಚಿನ್(29), ಹರಿ ಪ್ರಸಾದ್ 23), ಮೋಹನ್(23) ಎಂಬುವವರನ್ನು ಬಂಧಿಸಿದ್ದು, ಇವರು ಮಾರಕಾಯುಧದೊಂದಿಗೆ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

By suddi9

Leave a Reply

Your email address will not be published. Required fields are marked *