ಬಂಟ್ವಾಳ:ತಾಲ್ಲೂಕಿನಾದ್ಯಂತ ಒಂದು ತಿಂಗಳ ವೃತಾಚರಣೆ ಬಳಿಕ ಭಾನುವಾರ ದಿನವಿಡೀ ಸುರಿದ ಧಾರಾಕಾರ ಮಳೆಯ ನಡುವೆಯೂ ಮುಸ್ಲಿಮರು ಸಂಭ್ರಮ ಸಡಗರದಿಂದ ರಂಝಾನ್ ಹಬ್ಬ ಆಚರಿಸಿಕೊಂಡರು.ಇಲ್ಲಿನ ವಿವಿಧ ಮಸೀದಿಗಳಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಿ.ಸಿ.ರೋಡ್ ಮಿತ್ತಬೈಲು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಆಶ್ರಫ್ ಫೈಝಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಈದ್ ಸಂದೇಶ ನೀಡಿದರು.

25btl-Ramzan
ಇಲ್ಲಿನ ತುಂಬೆ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಅಬ್ದುಲ್ ಲತೀಫ್ ಫೈಝಿ, ಫರಂಗಿಪೇಟೆ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಉಸ್ಮಾನ್ ದಾರಿಮಿ, ಅಮ್ಮೆಮಾರ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಬೂಸಾಲಿ ಫೈಝಿ, ಸಜಿಪನಡು ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಸ್ಫಾಕ್ ಫೈಝಿ, ವಿಟ್ಲ ಮೇಗಿನಪೇಟೆ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮೂಸಲ್ ಫೈಝಿ, ವಗ್ಗ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಇಬ್ರಾಹಿಂ ಫೈಝಿ, ಗಡಿಯಾರ್ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಜಮಾಲುದ್ದೀನ್ ದಾರಿಮಿ, ಏನಾಜೆ ಬುಡೋಳಿ ಮುನೀರುಲ್ ಇಸ್ಲಾಮ್ ಮದರಸದಲ್ಲಿ ಮಜೀದ್ ದಾರಿಮಿ, ಪುಂಜಾಲಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಆಶ್ರಫ್ ಫೈಝಿ, ಬಾಂಬಿಲ ಮುಬಾರಕ್ ಜುಮ್ಮಾ ಮಸೀದಿಯಲ್ಲಿ ಸಿರಾಜುದ್ದೀನ್ ಫೈಝಿ ಸಾಮೂಹಿಕ ಈದ್ ನಮಾಝ್ಗೆ ನೇತೃತ್ವ ನೀಡಿದ್ದರು. ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಕೆಎಸ್ಆರ್ಪಿ ಮತ್ತಿತರ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *