ಬಿ.ಸಿ.ರೋಡು : ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರು ಬಿ.ಸಿ.ರೋಡು ಇದರ 35ನೇ ವಾರ್ಷಿಕ ಮಹಾಸಭೆಯು ಆದಿತ್ಯವಾರ ನಡೆಯಿತು. ಸತೀಶ್ ಕುಮಾರ್, ನಾರಾಯಣ ಗಟ್ಟಿ ಅಲೆತ್ತೂರು ಉಪಸ್ಥಿತರಿದ್ದರು. 2017-18ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಬಿ.ಸಿ.ರೋಡು ಪುನರಾಯ್ಕೆಗೊಂಡರು.26YA mangala

ಉಪಾಧ್ಯಕ್ಷ ಮೋಹನ್ ಶೆಟ್ಟಿ ಮತ್ತು ವಾಸುದೇವ್, ಕಾರ್ಯದರ್ಶಿ ಚಂದ್ರಪ್ರಕಾಶ್, ಜೊತೆ ಕಾರ್ಯದರ್ಶಿ ಗಿರಿಧರ್, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್, ಕ್ರೀಡಾ ಕಾರ್ಯದರ್ಶಿ ಅಶ್ವಥ್, ಶಿವರಾಜ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವಿಶ್ವನಾಥ ರೈ, ವಿಶ್ವನಾಥ ಪೂಜಾರಿ, ಉಮೇಶ್ ಬಂಗೇರ, ನಾಗೇಶ್ ಕುಲಾಲ್, ಭಾಸ್ಕರ ಪೂಜಾರಿ, ಸಂದೀಪ್, ವಿಶ್ವನಾಥ ಪೈ ಸರ್ವಾನುಮತದಿಂದ ಆಯ್ಕೆಗೊಂಡರು. ಚಂದ್ರಪ್ರಕಾಶ್ ವಾರ್ಷಿಕ ವರದಿ ಮಂಡಿಸಿದರು. ವಾಸುದೇವ್ ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *