ಬಂಟ್ವಾಳ, : ಇತ್ತೀಚೆಗೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಎಸ್‍ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಯುವಕರು ತಿರುಗಿ ನಿಲ್ಲುವ ಮೂಲಕ ವಿನೋತನ ಪ್ರತಿಭಟನೆ ನಡೆಸಿದರು. ಮುಹಮ್ಮದ್ ಅಶ್ರಫ್ ಹಂತಕರು ಕಾಂಗ್ರೆಸ್ ಪಕ್ಷದ ಮುಖಂಡರ ಆಪ್ತರು ಹಾಗೂ ಆಪ್ತರ ಮಕ್ಕಳಾಗಿದ್ದಾರೆ. ಹಿಂದುತ್ವ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧಿಸುತ್ತಿರುವುದು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‍ನ ಹಲವು ಮುಖಂಡರು ಅಂತವರನ್ನು ತಮ್ಮ ಆಪ್ತರನ್ನಾಗಿಸಿಕೊಂಡಿದ್ದಾರೆ. ಅಲ್ಲದೆ ಉದ್ಯೋಗದಲ್ಲೂ ಪಾಲುದಾರಿಕೆ ನೀಡುತ್ತಿದ್ದಾರೆ ಎಂಬುದು ಇಲ್ಲಿನ ನಾಗರಿಕರ ಆರೋಪ. 26vp rai bheti1

26vp rai bheti 2
ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಅಶ್ರಫ್ ಮನೆಗೆ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿದಾಗ ಸಚಿವರನ್ನು ನೋಡುವುದಿಲ್ಲ ಮತ್ತು ಅವರೊಂದಿಗೆ ಮಾತನಾಡುವುದಿಲ್ಲ ಎಂದು ಇಲ್ಲಿನ ಯುವಕರು ದಾರಿಯಲ್ಲಿ ತಿರುಗಿ ನಿಲ್ಲುವ ಮೂಲಕ ವಿನೋತನ ಪ್ರತಿಭಟನೆ ನಡೆಸಿದರು. ಅಲ್ಲದೆ ಸಚಿವ ರೈ ಅಶ್ರಫ್ ಮನೆಯಲ್ಲಿರುವ ಫೋಟೊ ತೆಗೆಯುವುದಕ್ಕೂ ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಜಿಲ್ಲಾ ಪಂಚಾಯತ್ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು. ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *