ಎಡಪದವು: ಬೈಕಿನಲ್ಲಿ ಬಂದ ಹೆಲ್ಮೆಟ್ಧಾರಿಗಳಿಬ್ಬರು ಯುವಕನೋರ್ವನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಎಡಪದವು ವಿವೇಕಾನಂದ ಶಾಲೆಯ ಬಳಿ ನಡೆದಿದೆ.
ವೃತ್ತಿಯಲ್ಲಿ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದ ಕುಪ್ಪೆಪದವು ನಿವಾಸಿ ಅಬೂಬಕ್ಕರ್ ಸಿದ್ಧಿಕ್ ಹಲ್ಲೆಗೊಳಗಾದವರು. ಇಂದು ಬೆಳಿಗ್ಗೆ ಕೆಲಸಕ್ಕೆ ತೆರಳುವ ವೇಳೆಯಲ್ಲಿ ಈ ಘಟನೆ ನಡೆದಿದ್ದು ಪೂರ್ಣ ವಿಚಾರ ಇನ್ನಷ್ಟೇ ತಿಳಿಯಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ವೈಷಮ್ಯ ಹರಡುವ ಮಸೇಜ್ಗಳು ಹರಿದಾಡುತ್ತಿದ್ದು ಜನರಲ್ಲಿ ಭೀತಿಯನ್ನುಂಟುಮಾಡಿದೆ.