ಶ್ರೀದೇವಿ ವಿದ್ಯಾಕೇಂದ್ರ ಶ್ರೀದೇವಿ ನಗರ ಪುಣಚ ಇಲ್ಲಿ ವಿಟ್ಲದ ಆರ್ ಕೆ ಆಟ್ರ್ಸ್ ಸಹಯೋಗದೊಂದಿಗೆ ನಡೆಯುವ ನೃತ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರೌಢ ಶಾಲಾ ಅಧ್ಯಾಪಕಿ ಗಂಗಮ್ಮ ಮಾತಾಜಿ ಉದ್ಘಾಟಿಸಿದರು. ನೃತ್ಯ ಗುರು ರಾಜೇಶ್ ಆರ್ ಕೆ ಆಟ್ರ್ಸ್ ವಿಟ್ಲ, ಸಲಹಾ ಸಮಿತಿ ಅಧ್ಯಕ್ಷ ಗಣೇಶ್ ಒ ಮತ್ತು ಸದಸ್ಯೆ ಮೀಣಾಕ್ಷಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಲೋಕೇಶ್ ಸ್ವಾಗತಿಸಿದರು. ಮಲ್ಲಿಕಾ ಮಾತಾಜಿ ವಂದಿಸಿದರು. ಶ್ವೇತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಪಾವನಾ, ನಮಿತಾಶ್ರೀ ಎನ್, ದಿವ್ಯಕುಮಾರಿ, ದೀಕ್ಷಾ ಕೆ ಹೆಚ್ ಮತ್ತು ಅನುಶ್ರೀ ಸಹಕರಿಸಿದರು.