ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದಉಜ್ವಲ ಯೋಜನೆಯಡಿ ಕಾವಳಪಡೂರು ಗ್ರಾ.ಪಂ ವ್ಯಾಪ್ತಿಯಅರ್ಹ ಫಲಾನುಭವಿಗಳಿಗೆ ಉಚಿತಗ್ಯಾಸ್ ಮತ್ತು ಸ್ಟೌವ್ ವಿತರಣೆಯಕಾರ್ಯಕ್ರಮವು ವಗ್ಗ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ 100ಕ್ಕೂ ಮಿಕ್ಕಿದ ಫಲಾನುಭವಿಗಳಿಗೆ ಉಚಿತಗ್ಯಾಸ್ ಮತ್ತು ಸ್ಟೌವ್ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೇಶ್ ನಾೈಕ್ ಉಳಿಪ್ಪಾಡಿ ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳನ್ನು ಬಂಟ್ವಾಳ ಕ್ಷೇತ್ರದ ಮನೆ ಮನೆಗಳಿಗೆ ತಲುಪಿಸುವಂತದ್ದು ಪಂಚಾಯತ್ ಸದಸ್ಯರ ಮತ್ತು ಪಕ್ಷದಕಾರ್ಯಕರ್ತರಜವಬ್ದಾರಿಯಾಗಿದೆ.ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಗಾರವನ್ನುಗ್ರಾಮಮಟ್ಟದಲ್ಲಿ ಮಾಡಲಾಗುವುದು. ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅದರ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಬಂಟ್ವಾಳವನ್ನು ಹೊಗೆ ಮುಕ್ತ ಶ್ರಮಿಸುವಂತೆ ಕರೆ ನೀಡಿದ ಅವರು ಅಗಸ್ಟ್ 15ರ ನಂತರ ಉಜ್ವಲ ಪ್ಲಸ್ಯೋಜನೆ ಅನುಷ್ಟಾನವಾಗಲಿದ್ದು ಸಂಸದ ನಳಿನ್ ಕುಮಾರ್ ಕಟೀಲುರವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದಎಲ್ಲಾ ಬಿಪಿಎಲ್ಕಾರ್ಡ್ದಾರರಿಗೆ ಈ ಯೋಜನೆಯ ಪ್ರಯೊಜನ ದೊರೆಯಲಿದೆ ಎಂದರು. ಕಾವಳಪಡೂರು ಗ್ರಾ.ಪಂ ಅಧ್ಯಕ್ಷರಾದ ಪ್ರಮೋದ್ಕುಮಾರ್ರೈಕಾಡಬೆಟ್ಟು, ಉಪಾಧ್ಯಕ್ಷರಾದ ಭವಾನಿ,ಗ್ರಾ.ಪಂ ಸದಸ್ಯರುಗಳಾದ ಸುರೇಶ್ ಸಫಲ್ಯ, ಆನಂದ ಮಧ್ವ,ಭಾಸ್ಕರ,ಸುಜಾತಶೆಣೈ,ಇಂದಿರಾ,ಸಂಪಾ ಕಾಡಬೆಟ್ಟು,ಲಕ್ಷ್ಮಿ ಮಧ್ವ,ಕಾವಳ ಮೂಡೂರು ಪಂಚಾಯತ್ ಸದಸ್ಯರಾದ ಮೋಹನ ಆಚಾರ್ಯ,ಕಾರಿಂಜೇಶ್ವರಗ್ಯಾಸ್ಏಜೆನ್ಸಿ ಮಾಲಕರಾದಕರುಣಾಕರ ಶೆಟ್ಟಿ,ಶ್ರೀ ದುರ್ಗಾಗ್ಯಾಸ್ಏಜೆನ್ಸಿ ಮಾಲಕರಾದ ಪ್ರಭಾಕರ ಶೆಟ್ಟಿ,ಭದ್ರಗ್ಯಾಸ್ಏಜೆನ್ಸಿಯ ಮಂಜುನಾಥ ಆಚಾರ್ಯ,ಕಾವಳಪಡೂರು ಬಿಜೆಪಿ ಪಂಚಾಯತ್ ಸಮಿತಿಯಅಧ್ಯಕ್ಷರಾದಜಗದೀಶ್ ಕಾಮತ್,ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿಯಾದ ರಮಾನಾಥರಾಯಿ ಉಪಸ್ಥಿತರಿದ್ದರು.ಶಿವಪ್ಪ ಗೌಡ ನಿನ್ನಿಕಲ್ಲುಕಾರ್ಯಕ್ರಮ ನಿರೂಪಿಸಿದರು,ಸತೀಶ್ ಶೆಟ್ಟಿ ವಂದಿಸಿದರು