ಕುಪ್ಪೆಪದವು  ಇಲ್ಲಿನ ಬಂಟ್ವಾಳ ರಸ್ತೆಯ ಪಿಲಿಪಂಜರ ಎಂಬಲ್ಲಿ ಇಂತಿಯಾಝ್ ಎಂಬವರಿಗೆ ಸೇರಿದ್ದ ಎರಡಂತಸ್ತಿನ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದ ಆದಂ ಎಂಬವರ ಮನೆಯ ಹಿಂಬಾಗಿಲ ಮೂಲಕ ಒಳನುಗ್ಗಿದ ಕಳ್ಳರು ಭಾರಿ ಪ್ರಮಾಣದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. 12 vp kuppepadavu crime 3
ಆದಂರ ತೃತೀಯ ಪುತ್ರಿಯ ವಿವಾಹವು ಸೆಪ್ಟಂಬರ್ 7 ರಂದು ನಡೆದಿದ್ದು ಮನೆಯವರೆಲ್ಲಾ ಮದುವೆ ಸಂಭ್ರಮದಿಂದ ಹೊರಬರುವ ಮುನ್ನವೇ ಈ ಘಟನೆ ನಡೆದಿದ್ದು ಮನೆಯವರೆಲ್ಲಾ ಆತಂಕಪಡುವಂತೆ ಮಾಡಿದೆ. ನಿನ್ನೆ ತಡರಾತ್ರಿ ಸುಮಾರು ಎರಡು ಘಂಟೆಗೆ ಕೋಲಿನ ಸಹಾಯದಿಂದ ಕಿಟಕಿಯ ಮೂಲಕ ಹಿಂಬಾಗಿಲ ಚಿಲಕ ತೆರೆದು ಒಳನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಸುಮಾರು 4 ನೆಕ್ಲೇಸ್ ,11 ಬಳೆಗಳು ,12 ಉಂಗುರ , ಸೇರಿದಂತೆ ಸುಮಾರು 14 ಲಕ್ಷ ಮೌಲ್ಯದ 73 ಪವನ್ ಚಿನ್ನಾಭರಣವನ್ನು ದೋಚಿರುವ ಕಳ್ಳರು ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾರೆ. 12 vp kuppepadavu crime 2
ಆದಂ ರ ಹೇಳಿಕೆಯ ಪ್ರಕಾರ ಕಳ್ಳರಲ್ಲಿ ಸುಮಾರು ಮೂರರಿಂದ ನಾಲ್ಕು ಮಂದಿಯಿದ್ದು ಅದರಲ್ಲಿ ಒಬ್ಬ ದಢೂತಿ ದೇಹವನ್ನು ಹೊಂದಿದ್ದ , ಕಳ್ಳತನದ ಸಮಯದಲ್ಲಿ ಕೇವಲ ಓರ್ವ ಕಳ್ಳ ಮಾತ್ರ ಮನೆಯೊಳಗೆ ಪ್ರವೇಶಿಸಿದ್ದರೆ , ಮತ್ತೋರ್ವ ಕಂಪೋಂಡ್ ಬಳಿ ನಿಂತು ಚಿನ್ನಾಭರಣಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ, ಮತ್ತೋರ್ವ ಕಾರಿನಲ್ಲೇ ಕುಳಿತಿದ್ದ ಎನ್ನಲಾಗುತ್ತಿದೆ. ವಷಯ ತಿಳಿದ ಮನೆಯವರು ಬೊಬ್ಬೆ ಹೊಡೆದಿದ್ದು ಕಳ್ಳರು ಪೊದೆಗಳಲ್ಲಿ ಓಡುವ ಮೂಲಕ ಪರಾರಿಯಾಗಿದ್ದಾರೆ.ಘಟನೆ ನಡೆದ ಕೆಲ ಸಮಯದಲ್ಲೇ ಕುಪ್ಪೆಪದವು ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ಬಿಳಿ ನಿಂತಿದ್ದ ಸ್ಯಾಂಟ್ರೋ ಕಾರು ವೇಗದ ಮೂಲಕ ಬಂಟ್ವಾಳದ ಕಡೆ ಚಲಿಸಿದೆ . ವಿಷಯ ತಿಳಿದ ಕೂಡಲೇ ಸಿಬ್ಬಂದಿಗಳೊಂದಿಗೆ ಆಗಮಿಸಿದ ಬಜಪೆ ಠಾಣಾಧಿಕಾರಿ ಟಿ.ಡಿ ನಾಗರಾಜ್ ಶ್ವಾನದಳದ ಮೂಲಕ ತಪಾಸಣೆ ನಡೆಸಿದ್ದು ಶ್ವಾನಗಳು ಬಂಟ್ವಾಳ ರಸ್ತೆಯ ಕಡೆ ಮುಖ ಮಾಡಿ ಓಡಿದೆ ಎಂದು ತಿಳಿದು ಬಂದಿದೆ.12 vp kuppepadavu crime 1

ಬೆರಳಚ್ಚು ತಜÐರು ಸ್ಥಳಕ್ಕಾಗಮಿಸಿ ಮಹಾಜರು ನಡೆಸಿ ,ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ . ಘಟನಾ ಸ್ಥಳದಲ್ಲಿ ಕತ್ತಿಯೋದು ದೊರೆತಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರ ಡಿಸಿಪಿ ಹನುಮಂತರಾಯ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಜಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಗರು ಕುಕ್ಕಟ್ಟೆ ಮುಂತಾದ ಸ್ಥಳಗಳ ಸಿಸಿ ಟಿವಿ ವರದಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *